ತುಮಕೂರು: ಕಣ್ಣು ಮುಂದೆಯೇ ತಂದೆ ಸಾವನ್ನಪ್ಪಿದ್ದು, ಅದನ್ನು ನೋಡಲಾಗದೇ 8 ವರ್ಷದ ಪುತ್ರ ರೋಧಿಸಿದ ಮನಕಲುಕುವ ಘಟನೆ ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿಯ ಹುಳಿಯಾರು ಪಟ್ಟಣದಲ್ಲಿ ನಡೆದಿದೆ. ಶಿವಕುಮಾರ್ (35) ಮೃತ ದುರ್ದೈವಿ. ಶಿವಕುಮಾರ್‌ ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಅಲಾಳಸಂದ್ರ ಗ್ರಾಮದ ನಿವಾಸಿಯಾಗಿದ್ದು,  ಅನ್ಲೋಡ್ ಮಾಡಲು ತನ್ನ ಮಗ ಪುನೀತ್ ಜೊತೆ ಟಾಟಾ ಎಸ್ ನಲ್ಲಿ ಹುಳಿಯಾರಿಗೆ ತೆರಳುತ್ತಿದ್ದರು.
ಚಾಲನೆ ಮಾಡುತ್ತಿರುವಾಗ ತಂದೆಗೆ ಹೃದಯಾಘಾತವಾದಾಗ ಸಮಯ ಪ್ರಜ್ಞೆ ಮೆರೆದ ಬಾಲಕ ಕೂಡಲೇ ವಾಹನದ ಸ್ಟೆರಿಂಗ್ ನಿಯಂತ್ರಿಸಿ ಅಫಘಾತ ತಪ್ಪಿಸಿದ್ದಾನೆ. ಶಿವಕುಮಾರ್ (30) 97 ಕಿ.ಮೀ ವಾಹನ ಚಲಾಯಿಸಿಕೊಂಡು ಬಂದಿದ್ದಾರೆ. ನಂತರ ಅವರು ಹೃದಯಾಘಾತವಾಗಿ ತೀರಿಕೊಂಡಿದ್ದಾರೆ.ಈ ಸಂದರ್ಭದಲ್ಲಿ ಅವರ ಮಗ ಪುನೀತ್ ಧೃತಿಗೆಡದೆ ಚಾಲಕನ ಸೀಟಿಗೆ ಬಂದು ಸ್ಟೆರಿಂಗ್ ನಿಯಂತ್ರಿಸಿ ಬದಿಗೆ ಸರಿಸಿ ವಾಹನ ನಿಲ್ಲಿಸಿದ್ದಾರೆ.

ತಂದೆಗೆ ಹೃದಯಘಾತವಾದ ಕೂಡಲೇ ಹೆದರಿದ್ದರೂ ಕೂಡ ಆತನ ಸಮಯ ಪ್ರಜ್ಞೆಯಿಂದ ಅಫಘಾತವೊಂದು ತಪ್ಪಿ ಹೋಗಿದೆ. ಶಾಲೆಗೆ ರಜೆಯಿರುವ ಕಾರಣ ತಂದೆಯೊಂದಿಗೆ ಆತ ಗೂಡ್ಸ್ ಗಾಡಿಯಲ್ಲಿ ಪ್ರಯಾಣಿಸುತ್ತಿದ್ದ. ಆದರೆ ದುರದೃಷ್ಟವಶಾತ್ ಮೇ 1 ರಂದು ಆತನ ಕಣ್ಣಿನ ಎದುರೇ ವಾಹನ ಚಲಾಯಿಸುವಾಗ ತಂದೆಗೆ ಹೃದಯಾಘಾತವಾಗಿದ್ದು, ವಾಹನ ನಿಂತ ಮೇಲೆ ಆತ ತಂದೆಯ ಬದಿಯಲ್ಲಿ ಕುಳಿತು ಅಳುತ್ತಿರುವ ದೃಶ್ಯ ಮನಕಲಕುವಂತಿತ್ತು.

Leave a Reply