ಮೊಟ್ಟೆ ಅಂದರೆ ಎಲ್ಲಾರಿಗೂ ಇಷ್ಟ. ಮೊಟ್ಟೆಯಿಂದ ನೀವು ಬಹಳಷ್ಟು ವಿಧಧ ತಿನಿಸುಗಳನ್ನು ಮಾಡಿರಬಹುದು ಹೆಚ್ಚಾಗಿ ಬೇಯಿಸಿ ತಿಂದಿರ ಬಹುದು ಅಥವಾ ಆಮ್ಲೇಟ್ ಮಾಡಿತಿಂದಿರಬಹುದು. ಅದರ ಜೊತೆಗೆ ಮೊಟ್ಟೆ ಕರಿ ಮಾಡಿ ತಿಂದಿದ್ದೀರಾ? ತಿನ್ನದಿದ್ದರೇ ಇಂದೇ ಮೊಟ್ಟೆ ಕರಿ ಮಾಡಿ ಮನೆಮಂದಿಯೊಂದಿಗೆ ಕೂತು ಸವಿಯಿರಿ.

ಮೊಟ್ಟೆ ಕರಿ ವಿಧಾನ

ಮೊಟ್ಟೆ ಕರಿ ಮಾಡಲು ಬೇಕಾಗುವ ಸಾಮಗ್ರಿಗಳು.
ಮೊಟ್ಟೆ -4 (ಬೇಯಿಸಿರಬೇಕು)
ಈರುಳ್ಳಿ-2
ಎಣ್ಣೆ – 3-4 ಚಮಚ
ಹಸಿರು ಮೆಣಸು – 2-3
ಟೆಮೋಟೋ-1
ಖಾರದ ಪುಡಿ -1 ಚಮಚ
ಕೊತ್ತಂಬರಿ ಪುಡಿ – 1 ಚಮಚ
ಅರಿಸಿನ- ಚಿಟಿಕಿ
ಗರಂ ಮಸಾಲಾ 1- ಚಮಚ
ಉಪ್ಪು – ರುಚಿಗೆ ತಕ್ಕಷ್ಟು ಉಪ್ಪು
ಕೊತ್ತಂಬರಿ ಸೊಪ್ಪು -ಸ್ವಲ್ಪ

ಮಾಡುವ ವಿಧಾನ : ಮೊದಲಿಗೆ ಗ್ಯಾಸ್ ಮೇಲೆ ಬಾಣಲೆಯನ್ನು ಇಟ್ಟು ಎರಡು ಚಮಚ ಎಣ್ಣೆ ಹಾಕಿ ಕಾಯಲು ಬಿಡಿ. ಎಣ್ಣೆ ಕಾದ ಬಳಿಕ ಅದಕ್ಕೆ ಸಣ್ಣಗೆ ಕತ್ತರಿಸಿದ ಈರುಳ್ಳಿಯನ್ನು ಹಾಕಿ ಪ್ರೈ ಮಾಡಿ. ಇಗ ಹಸಿ ಮೇಣಸಿನ ಕಾಯಿ ಕತ್ತರಿಸಿದ ಟೆಮೋಟೋ ಹಾಕಿ ಮುಚ್ಚಿ 2- 3 ನಿಮೀಷ ಬೇಯಿಸಿ. ನಂತರ ಅದಕ್ಕೆ ಖಾರದ ಪುಡಿ ಕೊತ್ತಂಬರಿ ಪುಡಿ ಅರಿಸಿನ,ಗರಂ ಮಸಾಲಾ ಹಾಕಿ 3 ನಿಮೀಷ ಮಿಕ್ಸ್ ಮಾಡಿ. ಒಂದು ಸಣ್ಣ ಕಪ್ ನೀರು. ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಐದು ನಿಮೀಷ ಕುದಿಸಿರಿ. ಮೊದಲೇ ಬೇಯಿಸಿರುವ ಮೊಟ್ಟೆ ಯನ್ನು ಹಾಕಿ ಅದರ ಮೇಲೆ ಮಸಾಲೆ ಹಾಕಿ ಮುಚ್ಚಿ ಎರಡು ಮೂರು ನಿಮೀಷ ಬೇಯಿಸಿ. ಇಗ ಲಿಡ್ ತೆರೆದು ಅದರ ಮೇಲೆ ಸಣ್ಣಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪು ಹಾಕಿದರೆ ರುಚಿಕರವಾದ ಎಗ್ ಕರಿ ಸವಿಯಲು ರೆಡಿ.

Leave a Reply