ಅಲಿಘರ್ : ಚಿಕಿತ್ಸೆ ನಡೆಯುವಾಗ ಮಹಿಳೆಯ ಬಾಯಿಯೊಳಗೆ ಸ್ಫೋಟ ಸಂಭವಿಸಿದ ಪರಿಣಾಮವಾಗಿ ಮಹಿಳೆ ಮೃತಪಟ್ಟ ಘಟನೆ ಉತ್ತರ ಪ್ರದೇಶದಲ್ಲಿ ವರದಿಯಾಗಿದೆ.
ವಿಷ ಸೇವಿಸಿದ್ದ ಈ ಮಹಿಳೆಯನ್ನು J.N ಆಸ್ಪತ್ರೆಗೆ ಬುಧವಾರ ಕರೆ ತರಲಾಗಿತ್ತು. ವಿಷ ಹೊರತೆಗೆಯಲು ವೈದ್ಯರು ಆಮ್ಲಜನಕ್ಕಾಗಿ ಮಹಿಳೆಯ ಬಾಯಿಗೆ ಪೈಪ್ ಹಾಕಿದ್ದು ಆಮ್ಲಜನಕ ಒಳ ಸೇರುತ್ತಿದ್ದಂತೆ ಬಾಯಿ ಸ್ಫೋಟಗೊಂಡು ಆ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಮಹಿಳೆ ಸಲ್ಫ್ಯೂರಿಕ್ ಆಮ್ಲವನ್ನುಸೇವಿಸಿದ್ದರು, ಆದ್ದರಿಂದ ಹೊರ ತೆಗೆಯುವಾಗ ಅದು ಸ್ಪೋಟಗೊಂಡಿದೆ ಎಂದು ವೈದ್ಯರು ಸಮಜಾಯಿಷಿ ನೀಡಿದ್ದಾರೆ. ಈ ಘಟನೆಯನ್ನು ಸರಿಯಾಗಿ ತನಿಖೆ ನಡೆಸಿ ಬಳಿಕ ಇದರ ವಿವರವನ್ನು ನೀಡುತ್ತೇವೆ ಎಂದು ಆಸ್ಪತ್ರೆಯ ವಕ್ತಾರರು ಹೇಳಿದ್ದಾರೆ. ಈ ದೃಶ್ಯಾವಳಿ ಆಸ್ಪತ್ರೆಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ವೈದ್ಯಕೀಯ ಜಗತ್ತಿನಲ್ಲಿಯೇ ಇದು ಮೊದಲ ಪ್ರಕರಣ ಎನ್ನಲಾಗಿದೆ. ಸದ್ಯ ಈ ಬಗ್ಗೆ ವೈದ್ಯರು ಸಂಶೋಧನೆ ಆರಂಭಿಸಿದ್ದಾರೆ.

Leave a Reply