ಕಾಸರಗೋಡು: ಇಲ್ಲಿನ ಜನರಲ್ ಆಸ್ಪತ್ರೆಯಲ್ಲಿ 18 ವರ್ಷದ ಯುವತಿ ಹೆಣ್ಣುಮಗುವಿಗೆ ಜನ್ಮನೀಡಿ ಮೆಲ್ಲನೆ ತಪ್ಪಿಸಿಕೊಳ್ಳು ಯತ್ನಿಸಿದಾಗ ಊರವರೆ ತಡೆದು ಪೊಲೀಸರಿಗೆ ತಿಳಿಸಿದ್ದಾರೆ.
ಪೊವ್ವಲ್ ಎಂಬಲ್ಲಿನ ಯುವತಿಗೆ ಹೆಣ್ಣುಮಗು ಜನಿಸಿದ್ದು, ಈಕೆ ಪ್ರೇಮಿ 22 ವರ್ಷದ ಯುವಕ ಗಲ್ಫ್‍ಗೆ ಕಾಲ್ಕಿತ್ತಿದ್ದಾನೆ ಎಂದು ಊರವರು ತಿಳಿಸಿದ್ದಾರೆ.ಆಡೂರಿನ ಯುವಕ ಯುವತಿಯನ್ನು ಪ್ರೀತಿಸಿ ಸಂಗ ಬೆಳೆಸಿ ಗರ್ಭಿಣಿಯನ್ನಾಗಿ ಮಾಡಿದ್ದ. ಗೆಳತಿ ಗರ್ಭಿಣಿಯೆಂದು ಅರಿತ ಬಳಿಕ ಸೌದಿಅರೇಬಿಯಕ್ಕೆ ಹೋಗಿದ್ದಾನೆ ಎನ್ನಲಾಗಿದೆ.
ರಹಸ್ಯ ವಿವರ ಸಿಕ್ಕಿದ ಹಿನ್ನೆಲೆಯಲ್ಲಿ ಕಾಸರಗೋಡಿನ ನಗರ ಪೊಲೀಸರು ಯುವತಿಯಿಂದ ಸಾಕ್ಷ್ಯ ಪಡೆದುಕೊಂಡು ತನಿಖೆ ಆರಂಭಿಸಿದ್ದಾರೆ. ವಿದ್ಯಾಭ್ಯಾಸ ಮಾಡುವ ಸಮಯದಲ್ಲಿಯೇ ಇವರು ಇಬ್ಬರು ಪ್ರೀತಿಸಿದ್ದರು ಎಂದು ತಿಳಿದು ಬಂದಿದೆ. ಮಗುವನ್ನು ತೊರೆದು ಪರಾರಿಯಾಗಲು ನೋಡಿದಾಗ ಊರವರೇ ಮಧ್ಯಪ್ರವೇಶಿಸಿದ್ದು, ನಂತರ ಅವರೇ ಪೊಲೀಸರಿಗೆ ತಿಳಿಸಿದ್ದಾರೆ.