ಕಾಸರಗೋಡು: ಕಾಸರಗೋಡಿನ ಕಾರಡ್ಕದ ಗ್ರಾಮಪಂಚಾಯತ್ ಅಧಿಕಾರವನ್ನು ಬಿಜೆಪಿ ಕಳಕೊಂಡಿದ್ದು, ಸುಮಾರು 18 ವರ್ಷಗಳ ಬಳಿಕ ಅಧಿಕಾರವನ್ನು ಬಿಜೆಪಿ ಕಳೆದು ಕೊಂಡತಾಗಿದ್ದು, ಇಂದು ಮಂಡಿಸಲಾದ ಅವಿಶ್ವಾಸ ನಿರ್ಣಯದಲ್ಲಿ ಬಿಜೆಪಿಗೆ ಸೋಲಾಗಿದೆ.

ಯುಡಿಪ್ ಮತ್ತು ಎಲ್‍ಡಿಎಫ್ ಮೈತ್ರಿಕೂಟ ಒಟ್ಟು ಸೇರಿ ಅವಿಶ್ವಾಸ ನಿರ್ಣಯ ಮಂಡಿಸಿದ್ದವು. ನಂತರ ನಡೆದ ಮತದಾನದಲ್ಲಿ ಸಿಪಿಎಂ ಬೆಂಬಲಿತ ಪಕ್ಷೇತರ ಸದಸ್ಯೆ. ಎ. ಅನಸೂಯ ರೈ 8-7 ಮತಗಳ ಅಂತರದಲ್ಲಿ ಕಾರಡ್ಕ ಪಂಚಾಯತ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು ಬಿಜೆಪಿಯಿಂದ ಅಧ್ಯಕ್ಷಸ್ಥಾನಕ್ಕೆ ಸ್ಪರ್ಧಿಸಿದ ಜಿ.ಸ್ವಪ್ನಾರಿಗೆ ಏಳು ಮತಗಳು ಬಿದ್ದಿವೆ.

ಪಂಚಾಯತ್‍ನಲ್ಲಿ 15 ಸದಸ್ಯರಿದ್ದು ಬಿಜೆಪಿಯ 7 ಮಂದಿ ಮತ್ತು ಮತ್ತು ಸಿಪಿಎಂನ 5 ಮಂದಿ ಸದಸ್ಯರಿದ್ದಾರೆ. ಮುಸ್ಲಿಂ ಲೀಗ್ 2 ಸದಸ್ಯರನ್ನು ಹೊಂದಿದೆ ಮತ್ತು ಓರ್ವ ಕಾಂಗ್ರೆಸ್ ಬೆಂಬಲಿತ ಸದಸ್ಯನಿದ್ದಾರೆ.

ಈ ಸಲ ಕಳೆದ ಎರಡೂವರೆ ವರ್ಷಗಳ ಅವಧಿಯಲ್ಲಿ ಪಂಚಾಯತ್‍ನಲ್ಲಿ ಅತಿಹೆಚ್ಚು ಸದಸ್ಯರನ್ನು ಹೊಂದಿರುವ ಬಿಜೆಪಿ ಇಲ್ಲಿ ಅಧಿಕಾರದಲ್ಲಿತ್ತು.

ಬಿಜೆಪಿಯ ವಿರುದ್ಧ ಅವಿಶ್ವಾಸ ಗೊತ್ತುವಳಿ ತಂದು ಯುಡಿಎಫ್ -ಎಲ್‍ಡಿಎಫ್ ಸಖ್ಯ ಪಂಚಾಯತ್ ಅಧಿಕಾರವನ್ನು ವಶಪಡಿಸಿಕೊಂಡಿದೆ. ಉಪಾಧ್ಯಕ್ಷ ಸ್ಥಾನಕ್ಕೆ ಇಂದು ಮಧ್ಯಾಹ್ನದ ಬಳಿಕ ಚುನಾವಣೆ ನಡೆಯುತ್ತಿದ್ದು ಕಾಂಗ್ರೆಸ್ ಬೆಂಬಲಿತ ಬಿ.ಕೆ. ವಿನೋದನ್ ನಂಬಿಯಾರ್ ಎಲ್‍ಡಿಎಫ್- ಯುಡಿಎಫ್ ಸಖ್ಯದ ಅಭ್ಯರ್ಥಿಯಾಗಿದ್ದಾರೆ. ಬಿಜೆಪಿಯಿಂದ ಮಾಜಿ ಉಪಾಧ್ಯಕ್ಷ ಎಂ. ಗೋಪಾಲಕೃಷ್ಣನ್ ಅಭ್ಯರ್ಥಿಯಾಗಿದ್ದಾರೆ. ಕಾರಡ್ಕ ಪಂಚಾಯತ್‍ನ ಅಧಿಕಾರ್ಲ ಕಳೆದ 18 ವರ್ಷಗಳಿಂದ ಬಿಜೆಪಿಯ ವಶದಲ್ಲಿತ್ತು.

ಕಾರಡ್ಕದ ಅಧಿಕಾರ ಬಿಜೆಪಿ ಕೈತಪ್ಪಿದ್ದು, ಕಾಸರಗೋಡು ಜಿಲ್ಲೆಯಲ್ಲಿ ಇನ್ನು ಬಿಜೆಪಿ ಮಧೂರ್, ವೆಳ್ಳೂರ್, ಎನ್ಮಕಜೆ ಪಂಚಾಯತ್‍ಗಳಲ್ಲಿ ಅಧಿಕಾರದಲ್ಲಿದೆ. ಇದರಲ್ಲಿ ಯುಡಿಎಫ್ ಎನ್ಮಕಜೆಯಲ್ಲಿ ಬಿಜೆಪಿ ವಿರುದ್ಧ ಅವಿಶ್ವಾಸ ಗೊತ್ತುವಳಿ ನೋಟಿಸು ನೀಡಿದೆ. ಮುಂದಿನ ವಾರ ಮತದಾನ ನಡೆಯಲಿದೆ.

Manoramaonline

Leave a Reply