ಸಿಕರ್: ಜೈನ್ ಮುನಿ ವಿಶ್ರಾಂತ್ ಸಾಗರ್ ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿದ್ದು, ಮಹಿಳೆಯರ ಮೇಲೆ ನಡೆಯುವ ಅಪರಾಧಗಳಿಗೆ ಮಹಿಳೆಯರೇ ಜವಾಬ್ದಾರರು . ಮಹಿಳೆಯರ ವಿರುದ್ಧದ ಅಪರಾಧಗಳಿಗೆ 95 ಪ್ರತಿಶತ ಮಹಿಳೆಯರೇ ಹೊಣೆಗಾರರಾಗಿದ್ದಾರೆ ಎಂದು ಅವರು ಹೇಳಿದರು.
ಮಹಿಳೆಯರನ್ನು ಕೇವಲ ಸರಕುಗಳೆಂದು ಭಾವಿಸುವುದರಿಂದ ಅವರು ಹೊರಗೆ ಬರಬೇಕು. ಮಹಿಳೆಯರು ತಮ್ಮ ಘನತೆಯನ್ನು ಕಾಪಾಡಿಕೊಳ್ಳಬೇಕು. ಅವರು ತಮ್ಮ ಮತ್ತು ಗಂಡನ ಎರಡೂ ಕಡೆಯ ಮನೆಯ ಗೌರವ ಕಾಪಾಡಿಕೊಳ್ಳಬೇಕು ಎಂದು ಮಧ್ಯ ಪ್ರದೇಶ ರಾಜ್ಯದ ಸಿಕಾರ ಜಿಲ್ಲೆಯ ಮುಖ್ಯಾಲಯದಲ್ಲಿ ಚತುರ್ಮಾಸ ಆಚರಣೆಯಲ್ಲಿ ತೊಡಗಿಕೊಂಡಿರುವ ಅವರು ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾಧ್ಯಮಗಳೊಂದಿಗೆ ಈ ವಿಷಯ ಹಂಚಿಕೊಂಡರು.
ಮಹಿಳೆಯರು ಪಾಶ್ಚಾತ್ಯ ಸಂಸ್ಕೃತಿಯಿಂದ ದೂರ ಉಳಿಯಬೇಕು. ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವಕ್ಕೆ ಒಳಗಾಗಿ, ದೇಶದ ಪರಂಪರೆಯನ್ನು ಮರೆಯುತ್ತಿರುವ ಕಾರಣದಿಂದಲೇ ದೇಶದಲ್ಲಿ ಶಾಂತಿ ಕದಡುವ ಪ್ರಕರಣಗಳು ಹೆಚ್ಚಾಗುತ್ತಿವೆ. ಆದ್ದರಿಂದ ಅವರಿಗೆ ಭಾರತೀಯ ಸಂಸ್ಕೃತಿಯ ಶಿಕ್ಷಣ ನೀಡಬೇಕು ಎಂದು ಒತ್ತು ಕೊಟ್ಟರು.