2-ಕಿಮೀ ಉದ್ದದ ಸರಕು ರೈಲಿನ ವಿಡಿಯೋ ಟ್ವಿಟರ್ ನಲ್ಲಿ ಸುದ್ದಿಯಾಗಿದೆ. ಮೂರು ಗೂಡ್ಸ್ ರೈಲುಗಳನ್ನು ಘಟಕವಾಗಿ ಒಗ್ಗೂಡಿಸುವ ರೈಲುಗಳ ಪ್ರಯೋಗವನ್ನು ದಕ್ಷಿಣ ಪೂರ್ವ ಮಧ್ಯ ರೈಲ್ವೇ (SECR) ಯಶಸ್ವಿಯಾಗಿ ಮಾಡಿದೆ. ಅತಿ ಉದ್ದದ ಆನಕೊಂಡ ಹಾವಿಗೆ ಹೋಲಿಕೆಯಾಗುವಂತೆ ಇದಕ್ಕೆ ಹೆಸರಿಸಲಾಗಿದೆ. ಅನಕೊಂಡ ರೈಲು ಎಂದು ಇದನ್ನು ಕರೆಯಲಾಗುತ್ತಿದ್ದು, (The Triple Long Haul Rack, dubbed as ‘Anaconda on Rails) ಇದು ಡೀಸೆಲ್ ಸಿಬ್ಬಂದಿ, ಲೊಕೊ ಪೈಲಟ್ ಮತ್ತು ಸಹಾಯಕ ಲೋಕೋ ಪೈಲಟ್ ಸಹಾಯದಿಂದ ನಡೆಸಲ್ಪಡುತ್ತದೆ. ಈ ಸರಕು ರೈಲನ್ನು ಆಧುನಿಕ ತಂತ್ರಜ್ಞಾನದ ಸಹಾಯದಿಂದ ರೂಪಿಸಲಾಗಿದೆ ಎಂದು ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ. ಇದರಿಂದ ರೈಲು ಮಾರ್ಗದ ಉಳಿಕೆ ಮತ್ತು ಸಿಬ್ಬಂದಿಗಳ ಉಳಿಕೆ ಸಹಿತ ಹಲವಾರು ತಾಂತ್ರಿಕ ಪ್ರಯೋಜನಗಳು ಇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Leave a Reply