ಬೀಜಿಂಗ್: ಇದು ಭಾರತದ ಘಟನೆಯಲ್ಲ. ಯಾಕೆಂದರೆ ಇಲ್ಲಿ ಚಲಿಸುತ್ತಿರುವ ವಾಹನದಿಂದ ಕಸ ಹೊರಗೆ ಎಸೆದು ಹೋಗುವುದು ಸಾಮಾನ್ಯ ವಿಚಾರ. ಇಲ್ಲಿ ನಮ್ಮ ಜನರು ಸ್ವಚ್ಛತಾ ಅಭಿಯಾನ ನಡೆಸಿದರೂ ಇನ್ನು ಜಾಗೃತರಾಗಿಲ್ಲ. ಆದರೆ ಈ ಘಟನೆ ಚೀನದ್ದು ಅಲ್ಲೇನಾಯಿತು ನೋಡಿ.

ಚೀನದ ಬೀಜಿಂಗ್‍ನಲ್ಲಿ ಕಾರಿನಿಂದ ಕಸವನ್ನುರಸ್ತೆಗೆ ಯಾರೊ ಎಸೆದಿದ್ದಾರೆ. ಅದೇ ದಾರಿಯಾಗಿ ಬಂದ ಮಹಿಳೆ ಅದನ್ನು ಬೈಕ್‍ನ್ನು ಅಡ್ಡವಾಗಿ ವಾಲಿಸಿ ಕಸವನ್ನು ಹೆಕ್ಕಿ ಪುನಃ ಕಾರಿನೊಳಗೆ ಎಸೆದು ತಮ್ಮ ಪಾಡಿಗೆ ಹೊರಟು ಹೋಗಿದ್ದಾರೆ. ಇದರಿಂದ ಕೋಪ ತಪ್ತನಾದ ಕಾರು ಚಾಲಕ ಹೊರಗೆ ಇಳಿದು ಮಹಿಳೆಯನ್ನು ನಿಂದಿಸಲು ನೋಡಿದ್ದಾನೆ. ಆದರೆ ಮಹಿಳೆ ತನಗೂ ಘಟನೆಗೂ ಸಂಬಂಧ ಇಲ್ಲವೆನ್ನುವಂತೆ ಸೀದಾ ಹೊರಟು ಹೋಗಿದ್ದಾಳೆ.

ಈ ವೀಡಿಯೊವನ್ನು ಜಿಜಿಟಿಎನ್ ಟ್ವಿಟರ್‍ನಲ್ಲಿ ಪೋಸ್ಟ್ ಮಾಡಿದೆ. ಹೀಗೆ ಎಲ್ಲೆಲ್ಲ ಕಸ ಬಿಸಾಕುವವರು ಈ ವೀಡಿಯೊವನ್ನು ನೋಡಬೇಕು. ನೋಡಿದರೆ ಸಾಲದು ಪಾಠ ಕಲಿಯಬೇಕು.

Leave a Reply