ನವದೆಹಲಿ : ಸಾಮಾಜಿಕ ಯೋಜನೆಗಳು ಹಾಗೂ ವಿವಿಧ ಆರ್ಥಿಕ ವ್ಯವಹಾರಗಳಿಗೆ ಕಡ್ಡಾಯವಾಗಿ ಬಳಸುತ್ತಿರುವ ಆಧಾರ್ ಕಾರ್ಡ್ ಗೆ ಸಂವಿಧಾನಾತ್ಮಕ ಮಾನ್ಯತೆ ನೀಡಬೇಕೆ ಎಂಬುದರ ಕುರಿತು ಸುಪ್ರೀಂ ಕೋರ್ಟಿನ ಐವರು ಹಿರಿಯ ನ್ಯಾಯ ಮೂರ್ತಿಗಳ ಪೀಠವು ಇಂದು ತೀರ್ಪು ಘೋಷಿಸಲಿದೆ.

ಆಧಾರ್ ಕಾರ್ಡ್ ನಿಂದ ಖಾಸಗಿತನ ಉಲ್ಲಂಘನೆಯಾಗುತ್ತಿದೆ ಎಂದು ಆಕ್ಷೇಪಿಸಿ ಸುಮಾರು 38 ದಿನಗಳಲ್ಲಿ 27 ಅರ್ಜಿಗಳ ಕುರಿತು ನ್ಯಾಯ ಪೀಠವು ವಿಚಾರಣೆ ನಡೆಸಿದೆ. ಬ್ಯಾಂಕ್ ಖಾತೆ, ಪ್ಯಾನ್ ಕಾರ್ಡ್, ಸೆಲ್ಫೋನ್, ಲೈಸೆನ್ಸ್,ಪಾಸ್ ಪೋರ್ಟ್ ಸೇರಿದಂತೆ ಸರಕಾರಿ ಸೇವೆಗಳಲ್ಲಿ ಬಳಸುವುದಕ್ಕಾಗಿ ಈಗಾಗಲೇ 100 ಕೋಟಿ ಭಾರತೀಯರು ಆಧಾರ್ ಕಾರ್ಡ್ ನೋಂದಾಯಿಸದ್ದಾರೆ.

ಈಗಾಗಲೇ ಆಧಾರ್ ಕಾರ್ಡ್ ನಿಂದ ವ್ಯಕ್ತಿಯ ಖಾಸಗಿತನಕ್ಕೆ ಧಕ್ಕೆ ಯಾಗುತ್ತಿದೆ ಮತ್ತು ಆಧಾರ್ ಕಾರ್ಡ್ ನಂಬರ್ ಮೂಲಕ ಮಾಡಿ ಹಲವರು ಹಣ ಲಪಟಾಯಿಸುದ್ದಾರೆ ಮುಂತಾದ ಚರ್ಚೆಗಳು ವ್ಯಾಪಕ ವಾಗಿದೆ.

Leave a Reply