ಸಾಂದರ್ಭಿಕ ಚಿತ್ರ

ನವದೆಹಲಿ: ಎಚ್ಚರಿಕೆ! ಹೊಸ ಹೊಸ ಶೈಲಿಯಲ್ಲಿ ಜನರು ದರೋಡೆ, ಕಳವು ಮಾಡುತ್ತಿದ್ದಾರೆ. ದೆಹಲಿಯಲ್ಲಿ ಕಾರಿನಲ್ಲಿ ಹೋಗುತ್ತಿದ್ದ ದಂಪತಿಗಳನ್ನು ಬೆದರಿಸಿ ಹಲ್ಲೆ ಮಾಡಿ ಚಿನ್ನಾಭರಣ ದೋಚಿದ ಘಟನೆ ವರದಿಯಾಗಿದೆ.

ಬೈಕಲ್ಲಿ ಬಂದ ಈರ್ವರು ಯುವಕರು ದಾರಿ ಕೇಳಿ ಕಾರಿನ ಗಾಜನ್ನು ಮುಟ್ಟಿ ತೆರೆಯುವಂತೆ ಮಾಡಿದರು. ತೆರೆದ ಕೂಡಲೇ ಬೈಕಿನ ಹಿಂಬದಿ ಸವಾರ ಕಾರಿನ ಕೀಯನ್ನು ಕಸಿದನು. ಅಷ್ಟರಲ್ಲಿ ಮೂರನೇಯ ವ್ಯಕ್ತಿಯು ಬಂದು ಕಾರಲ್ಲಿದ್ದ ದಂಪತಿಗಳ ಮೇಲೆ ಹಲ್ಲೆ ಮಾಡಿದನು. ಕೊಲೆ ಬೆದರಿಕೆಯೊಡ್ಡಿ ಚಿನ್ನಾಬರಣ ದೋಚಿದರು ಬಳಿಕ ಕಾರಿನ ಕೀಯನ್ನು ದೂರ ಎಸೆದು ಮೂವರೂ ಸ್ಥಳದಿಂದ ಪರಾರಿಯಾದರು.

ಇಂತಹ ದಾರಿ ಹೋಕರ ಬಗ್ಗೆ ಜಾಗ್ರತೆ ವಹಿಸಬೇಕಾಗಿದೆ ಎಂದು ಪೊಲೀಸರು ಹೇಳಿದ್ದು, ದೆಹಲಿ ಪೋಲೀಸರು ಘಟನೆಯ ಕುರಿತು ತನಿಖೆ ಆರಂಭಿಸಿದ್ದಾರೆ.

Leave a Reply