ಬೆಂಗಳೂರು ; ಸಾಲ ಮರು ಪಾವತಿ ಮಾಡುವಂತೆ ಬ್ಯಾಂಕುಗಳು ರೈತರಿಗೆ ನೋಟೀಸು ಜಾರಿ ಮಾಡಿ ಕಿರುಕುಳ ನೀಡಿದರೆ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಮುಖ್ಯಮಂತ್ರಿ ಕುಮಾರ ಸ್ವಾಮಿ ಎಚ್ಚರಿಗೆ ನೀಡಿದ್ದಾರೆ.

ರೈತರ ಸಾಲ ಮನ್ನಾ ಕುರಿತಂತೆ ಪರಿಶೀಲನಾ ಸಭೆ ನಡೆಸಿದ ಬಳಿಕ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರ ಸಾಲ ಮನ್ನಾ ಮಾಡಿ ಆದೇಶ ಹೊರಡಿಸಲಾಗಿದೆ. ಈ ಬಗ್ಗೆ ಮುಂದಿನ ಪಕ್ರಿಯೆಗಳು ನಡೆಯುತ್ತಿದೆ. ಆದರೂ ಕೆಲವು ಬ್ಯಾಂಕುಗಳು ರೈತರಿಗೆ ನೋಟೀಸು ನೀಡುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಸಹಕಾರಿಯಾಗಲೀ ರಾಷ್ಟ್ರೀಕೃತ ಬ್ಯಾಂಕ್ ಆಗಲಿ ರೈತರಿಗೆ ಈಗ ನೋಟಿಸ್ ನೀಡಬಾರದು ಒಂದು ವೇಳೆ ನೋಟಿಸ್ ನೀಡಿ ಕಿರುಕುಳ ನೀಡಿ ಮಾಡಿದರೆ ಬ್ಯಾಂಕ್ ಮುಖ್ಯಸ್ಥರ ಮೇಲೆ ಎಫೈಆರ್ ದಾಖಲಿಸಿ ಪೊಲೀಸ್ ಠಾಣೆಯಲ್ಲಿ ರೈತರಿಂದ ದೂರು ದಾಖಲಿಸಲಾಗುವುದು ಎಂದು ಹೇಳಿದರು.

ರೈತರನ್ನು ಪದೇ ಪದೇ ಹೆದರಿಸುವ ಕಾರ್ಯ ಮಾಡಬಾರದು, ಹಾಗೆ ಮಾಡಿದ್ದೇ ಆದಲ್ಲಿ ಅದಕ್ಕೆ ತಕ್ಕ ಬೆಲೆ ತೆರೆಬೇಕಾಗುತ್ತದೆ ಎಂದು ಸಿಎಂ ಎಚ್ಚರಿಸಿದರು.

Leave a Reply