ಬಾಲಿವುಡ್ ನ ಬಹು ನಿರೀಕ್ಷಿತ ಸಿನೆಮಾ “ಥಗ್ಸ್ ಆಫ್ ಹಿಂದೂಸ್ತಾನ್” ಚಿತ್ರದ ಪೋಸ್ಟರ್ ಸಂಚಲನ ಮೂಡಿಸಿದ್ದು, ಈ ಚಿತ್ರದಲ್ಲಿ ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಮತ್ತು ಮಿಸ್ಟರ್ ಪರ್ಫೆಕ್ಷನಿಸ್ಟ್ ಅಮೀರ್ ಖಾನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

“ಶ್ರೀ ಬಚ್ಚನ್ ಅವರೊಡನೆ ಪೋಸ್ಟರ್ ವೊಂದರಲ್ಲಿ ನನ್ನನ್ನು ನೋಡುವುದು ನನ್ನ ಬಹುಕಾಲದ ಕನಸು ಈಗ ನನಸಾಗಿದೆ. ನನಗಿನ್ನೂ ನಂಬಲು ಸಾಧ್ಯ ಆಗುತ್ತಿಲ್ಲ ಎಂದು 53 ವರ್ಷದ ಸೂಪರ್ಸ್ಟಾರ್ ಅಮೀರ್ ಖಾನ್ ಟ್ವೀಟ್ ಮಾಡಿದ್ದಾರೆ. ಇದು ಅಮೀರ್ ಖಾನ್ ಮತ್ತು ಅಮಿತಾಭ್ ಬಚ್ಚನ್ ಜೊತೆಯಾಗಿ ನಟಿಸುತ್ತಿರುವ ಮೊದಲ ಸಿನೆಮಾವಾಗಿದೆ. ಇಬ್ಬರೂ ದಿಗ್ಗಜರು ಒಂದೇ ಸಿನೆಮಾದಲ್ಲಿ ನಟಿಸುತ್ತಿರುವುದು ಸಿನಿ ಪ್ರಿಯರನ್ನು ಇನ್ನಷ್ಟು ರೋಮಾಂಚನಗೊಳಿಸಿದೆ. ಈ ಹಿಂದೆ ಅಮಿತಾಭ್ ಜೊತೆ ಶಾರುಖ್ ಖಾನ್, ಸಲ್ಮಾನ್ ಖಾನ್ ನಟಿಸಿದ್ದರು.

ಪೋಸ್ಟರ್ ನಲ್ಲಿ ಕತ್ರಿನಾ ಕೈಫ್, ದಂಗಲ್ ಸಿನೆಮಾ ಖ್ಯಾತಿಯ ನಟಿ ಫಾತಿಮಾ ಸನಾ ಶೇಖ್ ಕೂಡ ಇದ್ದಾರೆ.

Leave a Reply