ಹೊಸದಿಲ್ಲಿ: ಕಾಂಗ್ರೆಸ್ ವಿರುದ್ಧ ದಾಳಿ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ದೇಶಕ್ಕೆ ತಲೆನೋವು ಆಗಿ ಬದಲಾಯಿತೆಂದು ಹೇಳಿದರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಖ್ಯ ಏರ್ಪಡಿಸಲು ಕಾಂಗ್ರೆಸ್ ಯತ್ನಿಸುತ್ತಿದೆ ಎಂದು ಮಧ್ಯಪ್ರದೇಶದ ಚುನಾವಣಾ ರ್ಯಾಲಿಯಲ್ಲಿ ಮೋದಿ ಹೇಳಿದರು.

ಭಾರತೀಯ ರಾಜಕಾರಣದಿಂದ ಪ್ರಧಾನಿ ನರೇಂದ್ರ ಮೋದಿಯವರನ್ನು ತೆಗೆದುಹಾಕಬೇಕೆಂದು ಪ್ರತಿಪಕ್ಷ ಕಾಂಗ್ರೆಸ್ ಮತ್ತು ಪಾಕಿಸ್ತಾನಿ ಮುಖಂಡರ ನಡುವೆ ಪ್ಯಾರಲೆಲ್ ಆಗಿ ಶ್ರಮಿಸುತ್ತಿದ್ದಾರೆ. ಇಮ್ರಾನ್ ಖಾನ್ ಸೇರಿದಂತೆ ಪಾಕಿಸ್ತಾನಿ ನಾಯಕರು ಮೋದಿ ವಿರುದ್ಧ ದಾಳಿ ನಡೆಸುತ್ತಿರುವ ಟ್ವೀಟ್ ಅನ್ನು ಓದುತ್ತಾ ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಹೇಳಿದ್ದಾರೆ.

ಇದೇ ವೇಳೆ ರಫೆಲ್ ವ್ಯವಹಾರದಲ್ಲಿ ಮೋದಿಯನ್ನುಟೀಕಿಸಿ ಪುನಃ ರಾಹುಲ್ ರಂಗ ಪ್ರವೇಶಿಸಿದ್ದಾರೆ. ಸಾರ್ವಜನಿಕರ ಹಣವನ್ನು ಮೋದಿ ಕೊಳ್ಳೆಹೊಡೆದು ಅಂಬಾನಿಗೆ ನೀಡಿದ್ದಾರೆ. ಜನರ ಸೇವಕನೆಂದು ಹೇಳುವ ಮೋದಿ ಇದನ್ನು ಮಾಡುತ್ತಿದ್ದು, ರಫೇಲ್ ಕುರಿತು ಮಾತಾಡಲು ಮೋದಿ ಸಿದ್ಧರಿಲ್ಲ ಎಂದು ರಾಹುಲ್ ಗಾಂಧಿ ಟೀಕಿಸಿದರು.

Leave a Reply