ಹೊಸದಿಲ್ಲಿ: ರಫೇಲ್ ವಿಮಾನ ಹಗರಣದಲ್ಲಿ ಈಗ ಆರಂಭ ಮಾತ್ರ ಆಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ವಿಷಯಗಳನ್ನು ಬಹಿರಂಗಪಡಿಸುವುದಾಗಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಬಿಜೆಪಿ ನಡೆಸಿದ ಅಪರಾಧ ಕೃತ್ಯಗಳನ್ನು ಬಹಿರಂಗಪಡಿಸುತ್ತೇವೆ ಎಂದು ರಾಹುಲ್ ಗಾಂಧಿ ಹೇಳಿದರು. ಭ್ರಷ್ಟಾಚಾರದಲ್ಲಿ ಮುಳುಗಿದವರು ನೆಹರೂ ಕುಟುಂಬ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದರು. ರಫೇಲ್ ವ್ಯವಹಾರದಲ್ಲಿ ಜೆಪಿಸಿ ತನಿಖೆ ನಡೆಯಬೇಕಾಗಿದೆ ಎಂದು ಕಾಂಗ್ರೆಸ್ ಆಗ್ರಹಿಸಿದೆ.

ರಫೇಲ್ ಮತ್ತು ಬಿಜೆಪಿ ನಡುವಿನ ಮಾತಿನ ಜಗಳ ಮುಂದುವರಿದಿದೆ. ವಿವಾದಿತ ವ್ಯವಹಾರಕ್ಕೆ ಸಂಬಂಧಿಸಿ ಈಗ ಬಹಿರಂಗವಾಗಿರುವುದು ಒಂದು ಆರಂಭ ಮಾತ್ರ ಆಗಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ವಿವರಗಳು ಹೊರ ಬರಲಿವೆ. ರಫೇಲ್ ಅಲ್ಲದೆ ವಿಜಯ್ ಮಲ್ಯ ಪ್ರಕರಣ, ನೋಟು ನಿಷೇಧ, ಜಿಎಸ್‍ಟಿ ಮತ್ತು ಬಿಜೆಪಿ ನಡೆಸಿದ ಕರ್ತವ್ಯ ಲೋಪಗಳನ್ನು ಹೊರ ತರಲಾಗುವುದು ಎಂದು ಅಮೇಠಿಯಲ್ಲಿ ಕಾಂಗ್ರೆಸ್ ಸಾಮಾಜಿಕ ಮಾಧ್ಯಮ ಕಾರ್ಯಕರ್ತರ ಜೊತೆ ನಡೆಸಿದ ಆಶಯ ವಿನಿಯಮದಲ್ಲಿ ರಾಹುಲ್ ಗಾಂಧಿ ಹೇಳಿದರು.

ಇದೇ ವೇಳೆ ಪ್ರಧಾನಿಯ ವಿರುದ್ಧ ರಾಹುಲ್‍ರ ಹೇಳಿಕೆಗಳ ವಿರುದ್ಧ ಬಿಜೆಪಿ ರಂಗ ಪ್ರವೇಶಿಸಿದೆ. ಭಾರತದ ಇತಿಹಾಸದಲ್ಲಿ ಪ್ರಧಾನಿಯನ್ನು ಈ ರೀತಿಯ ಯಾರು ಅವಹೇಳನ ಮಾಢಿಲ್ಲ. ನೆಹರೂ ಕುಟುಂಬ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಹೇಳಿದರು.

ರಾಹುಲ್ ಗಾಂಧಿ ಪಾಕಿಸ್ತಾನದ ಪ್ರಭಾವದಲ್ಲಿದ್ದಾರೆ ಎಂದು ರವಿಶಂಕರ್ ಹೇಳಿದರು. ಇದೇ ವೇಳೆ ರಫೇಲ್‍ ವ್ಯವಹಾರದಲ್ಲಿ ಜಿಪಿಸಿ ತನಿಖೆ ಆಗಬೇಕೆಂಬ ಬೇಡಿಕೆ ತೀವ್ರಗೊಳ್ಳುತ್ತಿದೆ. ಜೆಪಿಸಿ ತನಿಖೆಗೆ ಆಗ್ರಹಿಸಿ ಹೆಚ್ಚಿನೆಲ್ಲ ಪ್ರತಿಪಕ್ಷಗಳನ್ನು ಕಾಂರೆಸ್ ಸಂಪರ್ಕಿಸುತ್ತಿದೆ.

Leave a Reply