ಹೊಸದಿಲ್ಲಿ: ವಿಕೆಟ್ ಕೀಪರ್ ಮಹೇಂದ್ರ ಸಿಂಗ್ ಧೋನಿಯವರನ್ನು ಪುನಃ ಕ್ರಿಕೆಟ್ ಇಂಡಿಯದ ಕ್ಯಾಪ್ಟನ್ ಮಾಡಲಾಗಿದೆ. ಏಶಿಯ ಕಪ್‍ನ ಸೂಪರ್ ನಾಲ್ಕು ಸ್ಪರ್ಧೆಯಲ್ಲಿ ಅಫಘಾನಿಸ್ತಾನದ ವಿರುದ್ಧ ಧೋನಿ ರೋಹಿತ್ ಶರ್ಮರ ಬದಲು ಟಾಸ್ ಮಾಡಿದ್ದು ಕ್ಯಾಪ್ಟನ್ಸಿಯಲ್ಲಿ 200ನೆ ಏಕದಿನ ದಾಖಲೆ ಮಾಡಲಿಕ್ಕಾಗಿ ಧೋನಿಗೆ ಟೀಮ್ ಇಂಡಿಯ ಈ ರೀತಿ ಅವಕಾಶ ಮಾಡಿಕೊಟ್ಟಿದೆ. ಧೋನಿ ಇದಕ್ಕಿಂತ ಮೊದಲು 199 ಮ್ಯಾಚ್‍ನಲ್ಲಿ ನಾಯಕನಾಗಿದ್ದು.ಇದರಲ್ಲಿ 110ರಲ್ಲಿ ಗೆದ್ದು 74ರಲ್ಲಿ ಸೋತು ನಾಲ್ಕನ್ನು ಡ್ರಾಮಾಡಿಕೊಂಡಿದ್ದರು. ಹನ್ನೊಂದು ಪಂದ್ಯಾಗಳಲ್ಲಿ ಫಲಿತಾಂಶ ಸಿಕ್ಕಿರಲಿಲ್ಲ.

ಧೋನಿ 696 ದಿನಗಳ ನಂತರ ನಾಯಕತ್ವವನ್ನು ಈ ಪಂದ್ಯದಲ್ಲಿ ವಹಿಸಿಕೊಂಡಿದ್ದಾರೆ. 200 ವನ್‍ಡೆ ಗಳಲ್ಲಿ ನಾಯಕತ್ವ ವಹಿಸಿಕೊಂಡ ಜಗತ್ತಿನ ಮೂರನೆ ನಾಯಕನಾಗಿ ಅವರು ದಾಖಲೆಯ ಪುಟಕ್ಕೆ ಸೇರಲಿದ್ದಾರೆ. ಆಸ್ಟ್ರೇಲಿಯದ ರಿಕಿಪಾಂಟಿಗ್ 230 ಏಕದಿನಗಳಲ್ಲಿ ನಾಯಕತ್ವವನ್ನು ವಹಿಸಿಕೊಂಡಿದ್ದರು. ನ್ಯೂಜಿಲೆಂಡ್‍ನ ಸ್ಟೀಫನ್ ಪ್ಲೆಮಿಂಗ್ 218 ಏಕದಿನಗಳಲ್ಲಿ ನಾಯಕನಾಗಿದ್ದರು.

ಅಫ್ಘಾನಿಸ್ತಾನದ ವಿರುದ್ಧ ಭಾರತ ತಂಡದಲ್ಲಿ ಐದು ಬದಲಾವಣೆ ಮಾಡಲಾಗಿದೆ. ರೋಹಿತ್ ಶರ್ಮ, ಉಪನಾಯಕ ಶಿಖರ್ ಧವನ್, ಭುವನೇಶ್ವರ್ ಕುಮಾರ್ ಜಸಪ್ರೀತ್ ಬುಮ್ರಾ ಮತ್ತು ಯುಜುರ್ವೇಂದ್ರ ಚಾಹಲರಿಗೆ ವಿಶ್ರಾಂತಿ ಮತ್ತು ದೀಪಕ್ ಚಾಹರ್ ಲೋಕೇಶ್ ರಾಹುಲ್ ಮನೀಶ್ ಪಾಂಡೆ ಖಲೀಲ್ ಅಹ್ಮದ್ ಮತ್ತು ಸಿದ್ಧಾರ್ಥ ಕೌಲ್‍ರಿಗೆ ಅವಕಾಶವನ್ನು ಮಾಡಿಕೊಡಲಾಗಿದೆ.

Leave a Reply