ಮಹೀಂದ್ರಾ ಸಮೂಹದ ಅಧ್ಯಕ್ಷರಾದ ಆನಂದ್ ಮಹೀಂದ್ರಾ ಪ್ರತಿ ಬಾರಿ ಜನ ಸಾಮಾನ್ಯರ ಸ್ಮಾರ್ಟ್ ಆವಿಷ್ಕಾರಗಳ ಚಿತ್ರ ವಿಡಿಯೋಗಳನ್ನು ಟ್ವಿಟರ್ ನಲ್ಲಿ ಪೋಸ್ಟ್ ಮಾಡುತ್ತಾ ಇರುತ್ತಾರೆ. ಅವುಗಳಲ್ಲಿ ವಿಶಿಷ್ಟವಾದವರಿಗೆ ಉಡುಗೊರೆಯನ್ನೂ ನೀಡುತ್ತಾರೆ. ಈ ಹಿಂದೆ ಆಟೋವನ್ನು ಮಹೀಂದ್ರಾ ಸ್ಕಾರ್ಪಿಯೋ ಆಗಿ ಪರಿವರ್ತಿಸಿದ ವ್ಯಕ್ತಿಯ ಅಟೋ ಪಡೆದು ಮಹೀಂದ್ರಾ ಸ್ಕಾರ್ಪಿಯೋ ಮೂಸಿಯಂ ನಲ್ಲಿ ಇಟ್ಟು ಅವರಿಗೆ ಬೇರೆ ಮಹೀಂದ್ರಾ ವಾಹನ ಉಡುಗೊರೆಯಾಗಿ ನೀಡಿದ್ದು ಸುದ್ದಿಯಾಗಿತ್ತು.
ಇದೀಗ ರೈತನೊರ್ವನ ವಿಡಿಯೋ ಅವರು ಶೇರ್ ಮಾಡಿದ್ದು, ರೈತ ಮಂಚವನ್ನು ಟ್ರಾಕ್ಟರ್ ಗೆ ಕಟ್ಟಿ ಜೆಸಿಬಿ ತರಹ ಬಳಕೆ ಮಾಡುತ್ತಿರುವುದನ್ನು ನೀವು ನೋಡಬಹುದು. ರೈತನು ಧಾನ್ಯ ಮತ್ತು ಹೊಟ್ಟುಗಳ ಕೆಲಸವನ್ನು ಕೈಯಿಂದ ಮಾಡುವ ಬದಲು ಹೊಸ ಸೃಜನಶೀಲ ಪ್ರಯೋಗ ಮಾಡಿದ್ದಾರೆ.

Leave a Reply