Image : The Live Mirror

https://twitter.com/SirJadeja/status/1131417506936004609

ಲೋಕ ಸಭೆ ಚುನಾವಣೆಯ ಬಗ್ಗೆ ಭಾವೋದ್ವೇಗದಲ್ಲಿ ಮಾತನಾಡುತ್ತಿದ್ದ ರಿಪಬ್ಲಿಕ್ ಟಿವಿ ಅರ್ನಾಬ್ ಗೋಸ್ವಾಮಿ ಸನ್ನಿ ಡಿಯೋಲ್ ಹೇಳುವ ಬದಲಿಗೆ ಸನ್ನಿ ಲಿಯೋನ್ ಎಂದು ಹೇಳಿದ್ದು, ಎಲ್ಲೆಡೆ ಟ್ರೋಲ್ ಮಾಡಲಾಗುತ್ತಿದೆ.ಪಂಜಾಬ್‌ನ ಗುರುದಾಸ್‌ಪುರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ ನಟ ಸನ್ನಿ ಡಿಯೋಲ್ 21,000 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ. ಇಲ್ಲಿ ಕಾಂಗ್ರೆಸ್ ನೇತಾರ ಸುನಿಲ್ ಜಖಾರ್ ಸನ್ನಿ ಡಿಯೋಲ್‌ ವಿರುದ್ಧ ಸ್ಪರ್ಧಿಸುತ್ತಿದ್ದಾರೆ. ಈ ಬಗ್ಗೆ ಸ್ವತಃ ಸನ್ನಿ ಲಿಯೋನ್ ಟ್ವೀಟ್ ಮಾಡಿ ತನಗೆ ಎಷ್ಟು ವೋಟು ಸಿಕ್ಕಿದೆ ಎಂದು ವ್ಯಂಗ್ಯ ಮಾಡಿದ್ದಾರೆ.

 

Leave a Reply