ಮೇ 28, 2019 ರಂದು ನಾನು ಭಾರತೀಯ ಪೊಲೀಸ್ ಸೇವೆಯಿಂದ ರಾಜಿನಾಮೆ ನೀಡಿದ್ದೇನೆ. ಅಧಿಕೃತ ಪ್ರಕ್ರಿಯೆ ಮುಗಿಯಲು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು. ಆರು ತಿಂಗಳ ನಂತರ ನಾನು ಈ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ.ನನ್ನ ಖಾಕಿಗೆ ಒಂಬತ್ತು ವರ್ಷಗಳು ಮತ್ತು ನಾನು ಪ್ರತಿ ಕ್ಷಣವೂ ನನ್ನ ಖಾಕಿಯಲ್ಲಿ ಬದುಕಿದ್ದೇನೆ. ನನ್ನ ಸಹೋದ್ಯೋಗಿಗಳೊಂದಿಗೆ ನಾನು ಹಂಚಿಕೊಂಡ ನಿಕಟಸ್ನೇಹವನ್ನು ಎಂದಿಗೂ ಮರೆಯಲ್ಲ. ಒಂದು ಅರ್ಥದಲ್ಲಿ ಪೊಲೀಸ್ ಕೆಲಸ ದೇವರಿಗೆಹತ್ತಿರವಾದ ಕೆಲಸ ಎಂದು ನಾನು ನಂಬುತ್ತೇನೆ. ಒತ್ತಡದ ಕೆಲಸಗಳು ತನ್ನದೇ ಆದ ಕಡಿಮೆ ಸಮಯದಲ್ಲಿ ಬರುತ್ತೆ. ನಾನು ಬಹಳಷ್ಟು ಕ್ಷಣಗಳನ್ನು ಕಾರ್ಯಕ್ರಮಗಳನ್ನು ಕಳೆದು ಕೊಂಡಿದ್ದೇನೆ. ಕಷ್ಟದಲ್ಲಿದ್ದಾಗ ಸಹಾಯ ಮಾಡಿದವರಿಗೆ ಅವರ ಕಷ್ಟದ ಸಮಯದಲ್ಲಿ ಸಹಾಯ ಮಾಡಲು ಸಾಧ್ಯವಾಗಲಿಲ್ಲ ಎಂಬ ಖೇದವಿದೆ ಎಂದು ಪತ್ರದ ಮೂಲಕ ತನ್ನ ರಾಜೀನಾಮೆ ಬಗ್ಗೆ ಪ್ರತಿಕ್ರಿಯೆ ವ್ಯಕ್ತ ಪಡಿಸಿದ್ದರು.

ಕರ್ನಾಟಕದ ಸಿಂಗಂ ಎಂದೇ ಖ್ಯಾತರಾಗಿರುವ ಅಣ್ಣಾಮಲೈ ಯವರ ಕರ್ತವ್ಯ ಬದ್ಧತೆಯ ಮತ್ತೊಂದು ಅಂಶ ಬೆಳಕಿಗೆ ಬಂದಿದೆ. ಕಳೆದ ಐದು ವರ್ಷಗಳಲ್ಲಿ ಅವರು ಕೇವಲ 21 ರಜೆ ಮಾತ್ರ ತೆಗೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ.  ರಾಜಿನಾಮೆಯ ನಂತರದ ತಮ್ಮ ಬದುಕು ಹೇಗಿರಲಿದೆ ಎಂಬುದರ ಕುರಿತು ಹೇಳುತ್ತಾ ಕುಟುಂಬ ಮತ್ತು ಮಗನಿಗೆ ಸಮಯ ಕೊಡಬೇಕು, ತಮ್ಮ ಸ್ವಂತ ಊರಿನಲ್ಲಿ ರೈತಾಪಿ ಜೀವನಕ್ಕೆ ಮರಳುತ್ತೇನೆ ಹಾಗೂ ನಾನೀಗ ಪೋಲಿಸ್ ಅಧಿಕಾರಿಯಲ್ಲದ ಕಾರಣ ನನ್ನ ಕುರಿಗಳು ನನ್ನನ್ನು ಆಲಿಸುತ್ತವೆಯೇ ಎಂದು ನೋಡುತ್ತೇನೆ ಎಂದೂ ಬರೆದುಕೊಂಡಿದ್ದಾರೆ.

Leave a Reply