ಸಾಂದರ್ಭಿಕ ಚಿತ್ರ

ರಾಯಚೂರು: ರಾಯಚೂರಿನ ಕಿವಿ ಕೇಳದ ಮತ್ತು ಮಾತು ಬರದ ಪುಟ್ಟ ಹುಡುಗಿಗೆ ಆಸ್ಟ್ರೇಲಿಯಾ ಕ್ರಿಕೆಟ್ ಆಲ್ ರೌಂಡರ್, ಬ್ರೆಟ್ ಲೀ ಧನ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಸಾಕ್ಷಿ ರಾಯಚೂರಿನ ಸಿಂಧನೂರ್ ತಾಲೂಕಿನ ಜವಳಗೇರಾ ಗ್ರಾಮದ ಬಾಲನ ಗೌಡ ಮತ್ತು ಕವಿತಾ ದಂಪತಿಯ ಪುತ್ರಿ. ಈಕೆಗೆ ಒಂದು ವರ್ಷ ಆದಾಗಲೇ ಈಕೆ ಮಾತಾಡಲ್ಲ ಮತ್ತು ಕೇಳಿಸಲ್ಲ ಎಂಬುದು ಸ್ಪಷ್ಟವಾಗಿ ಮನವರಿಕೆ ಆಗಿತ್ತು. ಮಗಳು ಎಲ್ಲರಂತೆ ಮಾತಾಡಬೇಕು ಮತ್ತು ಕೇಳಿಸಬೇಕು ಎಂಬುದು ಹೆತ್ತವರ ಅತೀವ ಬಯಕೆಯಾಗಿತ್ತು. ಅವರು ಅದಕ್ಕಾಗಿ ಏನೆಲ್ಲಾ ಪ್ರಯತ್ನ ಮಾಡಿದ್ದರು.

ಇದೀಗ ಮೂರು ವರ್ಷಗಳ ಸತತ ಚಿಕಿತ್ಸೆಯ ಬಳಿಕ ಸಾಕ್ಷಿ ಮಾತಾಡುತ್ತಿದ್ದು ಎಲ್ಲರ ಮಾತನ್ನೂ ಕೇಳುತ್ತಿದ್ದಾಳೆ. ಈ ಚಿಕಿತ್ಸೆಗೆ ಆಸ್ಟ್ರೇಲಿಯನ್ ಬೌಲರ್ ಆಲ್ರೌಂಡರ್ ಬ್ರೆಟ್ ಲೀ ಬರೋಬ್ಬರಿ 16 ಲಕ್ಷ ರೂಪಾಯಿ ಖರ್ಚು ಮಾಡಿ ಸಹಾಯ ಮಾಡಿದ್ದಾರೆ.

courtesy – Public Tv

ಮಗಳನ್ನು ರಾಯಚೂರಿನ ಸ್ಥಳೀಯ ಆಸ್ಪತ್ರೆ ಮತ್ತು ಮೈಸೂರಿನ ಮಾನಸ ಗಂಗೋತ್ರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದರೂ ಯಾವುದೇ ಪ್ರಯೋಜನ ಆಗಿರಲಿಲ್ಲ. ನಂತರ ಬೆಂಗಳೂರಿನ ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆಯ ರಾಷ್ಟ್ರೀಯ ಬಾಲ ಸ್ವಾಸ್ತ್ಯ ಕಾರ್ಯಕ್ರಮದಡಿ ಶಸ್ತ್ರ ಚಿಕಿತ್ಸೆಯು ಆಕೆಗೆ ಫಲಕಾರಿಯಾಗಿದೆ. ಮೊದಲು ಕೈಸನ್ನೆಯಲ್ಲಿ ಮಾತಾಡುತ್ತಿದ್ದ ಸಾಕ್ಷಿ ಈಗ ಚೆನ್ನಾಗಿ ಮಾತಾಡುತ್ತಾಳೆ. ಮಾತ್ರವಲ್ಲ ಇತ್ತೀಚಿಗೆ ಬ್ರೆಟ್ ಲೀ ಆಕೆಯನ್ನು ಬೆಂಗಳೂರಿಗೆ ಬಂದಾಗ ಭೇಟಿ ಮಾಡಿ ಕುಶಲೋಪರಿ ವಿಚಾರಿಸಿದ್ದಾರೆ.


Original news inputs from Public tv

1 COMMENT

Leave a Reply