ಪೆರಿಂದಲ್ ಮನ್ನ: ಆರು ವರ್ಷಗಳ ನಿರಂತರ ಪರಿಶ್ರಮದಿಂದ ವಿಶ್ವದಲ್ಲಿಯೇ ಅತ್ಯಂತ ದೊಡ್ಡದೆಂದು ಹೇಳಲಾಗುವ ಪವಿತ್ರ ಕುರ್‍ಆನಿನ ಕೈಬರಹದ ಪ್ರತಿಯೊಂದನ್ನು ಸಿದ್ಧ ಪಡಿಸಲಾಗಿದೆ. 94 ಸೆಂಟಿ ಮೀಟರ್ ಉದ್ದ 61 ಸಂಟಿ ಮೀಟರ್ ಅಗಲ ಆರು ಸೆಂಟಿ ಮೀಟರ್ ದಪ್ಪದ ಕೈ ಬರಹದ ಪ್ರತಿಯ ತೂಕ 35ಕಿಲೋ ಗ್ರಾಮ್ ಇದೆ. ಕೇರಳದ ಪೆರಿಂದಲ್ ಮಣ್ಣದ ಮಹಮ್ಮದ್(66) ಎಂಬವರ ತ್ಯಾಗ ಪರಿಶ್ರಮ ಇದರ ಹಿಂದೆ ಅಡಗಿದೆ.

2013 ಜನವರಿ ಎಂಟರಂದು ಪ್ರಾರಂಭಿಸಿದ ಈ ಕುರ್‍ಆನ್ ಕೈ ಬರಹದ ಪ್ರತಿಯ ತಯಾರಿಕೆಯು ಸೆಪ್ಟಂಬರ್ 21 ರಂದು ಮುಂಜಾನೆ ಪೂರ್ತಿಗೊಂಡಿತು. ಬಿಎಸ್ಎನ್ಎಲ್ ಉದ್ಯೋಗಿಯಾಗಿದ್ದ ಮಹಮ್ಮದ್ ನಿವೃತ್ತಿ ಹೊಂದಿದ ಬಳಿಕ ಕಳೆದ ಆರು ವರ್ಷಗಳಿಂದ ದಿನವೂ ನಾಲ್ಕು ಗಂಟೆಗಳ ಸಮಯವನ್ನು ಇದಕ್ಕಾಗಿ ವ್ಯಯಿಸಿದ್ದರು.

Leave a Reply