ಬೇಕಾಗುವ ಸಾಮಗ್ರಿಗಳು:

ಬೋನ್‍ಲೆಸ್ ಚಿಕನ್ – 1 ಕೆಜಿ, ಮೊಸರು – 2 ಕಪ್, ಶುಂಠಿ, ಬೆಳ್ಳುಳ್ಳಿ ಪೇಸ್ಟ್ – 4 ಟೀ.ಸ್ಪೂ., ಟೊಮ್ಯಾಟೋ (ಸಣ್ಣಗೆ ಹೆಚ್ಚಿದ್ದು) – 300 ಗ್ರಾಂ, ಟೊಮ್ಯಾಟೋ ಕೆಚಪ್ – 1 ಕಪ್, ಈರುಳ್ಳಿ – 4-5, ಲವಂಗ ಎಲೆ – 1, ದಾಲ್ಚಿನ್ನಿ – 2 ತುಂಡು, ಲವಂಗ – 5, ಮೊಗ್ಗು – 3, ಏಲಕ್ಕಿ – 3, ಬೆಣ್ಣೆ – 250 ಗ್ರಾಂ, ರುಚಿಗೆ ತಕ್ಕಷ್ಟು – ಉಪ್ಪು, ಮೆಣಸಿನ ಹುಡಿ – 2 ಟೀ.ಸ್ಪೂ. (ಹೆಚ್ಚು ಬೇಕಾದಲ್ಲಿ ಹಾಕಬಹುದು), ಗರಂ ಮಸಾಲ ಹುಡಿ – 2 ಟೀ.ಸ್ಪೂ., ಫ್ರೆಶ್ ಕ್ರೀಮ್ – ಅರ್ಧ ಕಪ್, ರೀಫೈಂಡ್ ಎಣ್ಣೆ – ಅರ್ಧ ಸೌಟು, ಕೊತ್ತಂಬರಿ ಸೊಪ್ಪು, ಪುದೀನ – 1/2 ಕಪ್

ಮಾಡುವ ವಿಧಾನ:

ಒಂದು ಬೇಸನ್ನಿಗೆ ತುಂಡರಿಸಿದ ಚಿಕನ್ ತುಂಡುಗಳನ್ನು ಹಾಕಿಕೊಂಡು ಅದಕ್ಕೆ ಟೊಮ್ಯಾಟೋ ಕೆಚಪ್ ಮಿಶ್ರಣ ಸೇರಿಸಿ ಚೆನ್ನಾಗಿ ಬೆರೆತುಕೊಳ್ಳುವಂತೆ ಮಾಡಿ. ಇದನ್ನು 1 ತಾಸು ಹಾಗೇ ಮ್ಯಾರಿನೇಟ್ ಆಗಲು ಬಿಡಿ. ಮೊಸರು, ಏಲಕ್ಕಿ, ಲವಂಗ, ದಾಲ್ಚಿನ್ನಿ, ಮೊಗ್ಗು, ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಮೆಣಸು, ಗರಂಮಸಾಲ ಹುಡಿ- ಎಲ್ಲ ಸೇರಿಸಿ ರುಬ್ಬಿ. ಇದನ್ನು ಕೋಳಿ ಮಿಶ್ರಣಕ್ಕೆ ಹಾಕಿ ಪುನಃ ಮೆರಿನೇಟ್ ಮಾಡಿ.

ಒಂದು ಪ್ರೆಶರ್ ಪ್ಯಾನಿನಲ್ಲಿ ಎಣ್ಣೆ ಬಿಸಿ ಮಾಡಿ ಮೊದಲು ಹೆಚ್ಚಿದ ಈರುಳ್ಳಿ ಹಾಕಿ ಬಾಡಿಸಿ. ನಂತರ ಟೊಮೆಟೋ ಹಾಕಿ ಬಾಡಿಸಿದ ಮೇಲೆ ಬೆಣ್ಣೆ ಬೆರೆಸಿ ಬೇಗ ಬೇಗ ಕೈಯಾಡಿಸಿ. ನಂತರ ಇದಕ್ಕೆ ಮ್ಯಾರಿನೇಟೆಡ್ ಚಿಕನ್ ಬೆರೆಸಿ. ದೊಡ್ಡ ಉರಿಯಲ್ಲಿ 10 ನಿಮಿಷ ಬಾಡಿಸಬೇಕು. ಕಾಲು ಕಪ್ ನೀರು ಬೆರೆಸಿ, ಮುಚ್ಚಳ ಮುಚ್ಚಿ 1 ಸೀಟಿ ಬರುವಂತೆ ಬೇಯಿಸ ಬೇಕು. ವೆಯ್ಟ್ ತೆಗೆದ ನಂತರ ಮತ್ತೆ ಚೆನ್ನಾಗಿ ಕೈಯಾಡಿಸಿ ಕೆಳಗಿಳಿಸಿ. ಇದಕ್ಕೆ ಹೆಚ್ಚಿದ ಕೊತ್ತಂಬರಿ ಸೊಪ್ಪು, ಪುದೀನಾ ಸೊಪ್ಪು ಉದುರಿಸಿ ಬಿಸಿ ಬಿಸಿಯಾಗಿ ಚಪಾತಿ, ನಾನ್‍ನೊಂದಿಗೆ ಸವಿಯಿರಿ.

Leave a Reply