ದೋಹ: ಸಯಾಮಿ ಅವಳಿಗಳಿಗೆ ಇಲ್ಲಿನ ಸಿದ್ರ ಮೆಡಿಸಿನ್ ಆಸ್ಪತ್ರೆಯಲ್ಲಿ ಯಶಸ್ಚಿ ಶಸ್ತ್ರ ಚಿಕಿತ್ಸೆ ನಡೆಸುವ ಮೂಲಕ ಬೇರ್ಪಡಿಸಲಾಗಿದೆ. ಮಾಲಿಯ ದಂಪತಿಗಳಿಗೆ ಸಯಾಮಿ ಅವಳಿಗಳಾದ ಹಮದ್ ಮತ್ತು ತಮೀಮ್ ಪರಸ್ಪರ ದೇಹಕ್ಕಂಟಿಕೊಂಡ ಸ್ಥಿತಿಯಲ್ಲಿ ಜನಿಸಿದ್ದರು.

ಅತಿ ಸಾಹಸಿಕವಾಗಿ ಸಿದ್ರಮೆಡಿಸಿನ್ ಹಾಸ್ಪಿಟಲ್‍ನ 150 ಮಂದಿಯ ವೈದ್ಯರ ತಂಡ ಒಂಬತ್ತು ಗಂಟೆಗಳ ಕಾಲ ನಡೆಸಿದ ಸುದೀರ್ಘ ಶಸ್ತ್ರಕ್ರಿಯೆಯಲ್ಲಿ ಅವಳಿಗಳನ್ನು ಬೇರ್ಪಡಿಸಲಾಗಿದೆ.

ಮಾಲಿಯ ದಂಪತಿಗೆ ಹಮದ್ ಆಸ್ಪತ್ರೆಯಲ್ಲಿ ಸಯಾಮೀಸ್ ಅವಳಿಗಳು ಜನಿಸಿದ್ದರು. ಎದೆಯ ಕೆಳಭಾಗದಲ್ಲಿ ಅವರಿಬ್ಬರ ಶರೀರ ಅಂಟಿಕೊಂಡಿತ್ತು. ಎರಡು ಮಕ್ಕಳಿಗೆ ಒಂದು ಕರುಳು ಮಾತ್ರ ಇತ್ತು. ಈ ಕರಳನ್ನು ಬೇರ್ಪಡಿಸುವುದು ಶಸ್ತ್ರಕ್ರಿಯೆಯಲ್ಲಿ ಅತ್ಯಂತ ಅಪಾಯಕಾರಿ ಸರ್ಜರಿಯಾಗಿತ್ತು ಎಂದು ಶಸ್ತ್ರಕ್ರಿಯೆಗೆ ನೇತೃತ್ವ ನೀಡಿದ ಸಿದ್ರ ಮೆಡಿಸಿನ್‍ನ ಚಿಫ್ ಮೆಡಿಕಲ್ ಆಫಿಸರ್ ಡಾ. ಅಬ್ದುಲ್ ಅಲ್ ಕಅಬಿ ಹೇಳಿದರು. ಕತರ್‍ನ ನಲ್ಲಿ ನಡೆದ ಮೊದಲ ಸಯಾಮಿ ಅವಳಿಗಳ ಶಸ್ತ್ರಕ್ರಿಯೆಯಿದಾಗಿದ್ದು ಯಶಸ್ವಿಯಾಗಿದೆ.

ಸರಿಯಾದ ಪೂರ್ವ ಸಿದ್ಧತೆಯಿಂದಾಗಿ ಶಸ್ತ್ರಕ್ರಿಯೆ ಯಶಸ್ವಿಯಾಯಿತು ಎಂದು ಸಿದ್ರದ ಪೀಡಿಯಾಟ್ರಿಕ್ ವಿಭಾಗ ಮುಖ್ಯಸ್ಥ ಡಾ. ಅಬ್ದುಲ್ಲ ಇ. ಸರೂಕ್ ಹೇಳಿದರು. ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಕ್ಕಳನ್ನು ಕರೆತರಲಾಗಿತ್ತು. ಇಬ್ಬರು ಮಕ್ಕಳೂ ಆರೋಗ್ಯದಿಂದ್ದರು. ಸರ್ಜರಿ ನಡೆಸಿದ ವೈದ್ಯಕೀಯ ತಂಡಕ್ಕೆ ಮಕ್ಕಳ ತಂದೆ ಮಾಲಿ ನಿವಾಸಿ ಕೃತಜ್ಞತೆ ತಿಳಿಸಿದ್ದಾರೆ. ಶಸ್ತ್ರಕ್ರಿಯೆಯಲ್ಲಿ ಭಾಗವಹಿಸಿದ ಇಡೀ ತಂಡ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತವಿತ್ತು.

Leave a Reply