Representational Image

ಧ್ವನಿ: ನನ್ನ ಮಗನಿಗೆ ಊರೆಲ್ಲಾ ಹುಡುಕಿ ಒಂದು ಹೆಣ್ಣನ್ನು ಮೆಚ್ಚಿಕೊಂಡು ಸೊಸೆಯಾಗಿ ಮಾಡಿಕೊಂಡ ಸೊಸೆ ವಿದ್ಯಾವಂತ ನಗರ ದಲ್ಲಿ ಬೆಳೆದಾಕೆ. ಅನುಕೂಲಸ್ತರ ಕುಟುಂಬದ ವಳು. ನನಗೆ ಆದಷ್ಟು ಬೇಗ ಮೊಮ್ಮಗನನ್ನು ನೋಡುವ ಆಸೆ. ಓರ್ವನೇ ಮಗನಾಗಿದ್ದರಿಂದ ಮನೆಯಲ್ಲಿ ಮಗುವನ್ನು ಕಾಣಲು ತವಕ ಪಡುತ್ತಿದ್ದೇನೆ. ವಿವಾಹವಾಗಿ ಮೂರು ವರ್ಷ ಕಳೆಯಿತು. ಸೊಸೆ ಗರ್ಭವತಿಯಾಗಿಲ್ಲ. ಬಹುಶಃ ಏನಾದರೂ ಆರೋಗ್ಯ ಸಮಸ್ಯೆ ಇರಬಹುದೆಂದು ವೈದ್ಯರತ್ತಿರ ಕರೆದೊಯ್ದೆ. ವೈದ್ಯರು ಪರೀಕ್ಷಿಸಿ ಯಾವುದೇ ಸಮಸ್ಯೆ ಇಲ್ಲ ಅಂದರು. ಸೊಸೆಗೆ ಒಬ್ಬಳು ಅಕ್ಕ ಇದ್ದಾಳೆ. ಆಕೆಗೆ ಮದುವೆ ಆಗಿ ಏಳು ವರ್ಷವಾಯಿತು. ಮಕ್ಕಳಾಗಿಲ್ಲ. ಪತಿಯೊಂದಿಗೆ ಆಕೆಯ ಸಂಬಂಧ ಅನ್ನೋನ್ಯವಾಗಿಲ್ಲವೆಂದು ತಿಳಿಯಿತು.ಯಾವಾಗಲೂ ಜಗಳ ಮಾಡುತ್ತಾ ಇರುವ ಸ್ವಭಾವ. ಈ ಅಕ್ಕನೇ ನನ್ನ ಸೊಸೆಗೆ ಮಾರ್ಗ ದರ್ಶಕಳೆಂದು ತಿಳಿಯಿತು.

“ನೀನು ಇಷ್ಟು ಬೇಗ ತಾಯಿಯಾಗಬೇಡಾ. ತಾಯಿ ಯಾದರೆ ಖರ್ಚುವೆಚ್ಚ ಜಾಸ್ತಿ. ಸ್ವಾತಂತ್ರ್ಯವಿರದು. ತಾಪತ್ರಯಗಳು ಇತ್ಯಾದಿ ಉಪದೇಶ ನೀಡಿದ ಪ್ರಚೋದನೆಯಿಂದಾಗಿ ಆಕೆಯ ತಂಗಿಯ ಅಕ್ಕಳಂತೆ ವರ್ತಿಸಲು ಶುರು ಮಾಡಿದ್ದಾಳೆ. ಎಷ್ಟರವರೆಗೆಂದರೆ ಅಕ್ಕನ ಮಾತು ಕೇಳಿ ತನ್ನ ಪತಿಯನ್ನು ಡೈವೋರ್ಸ್ ಮಾಡುವ ಬೆದರಿಕೆ ಹಾಕಿದ್ದಾಳೆ.

“ನಾನು ವಿದ್ಯಾವಂತೆ. ನನಗೆ ಎಲ್ಲಿಯೂ ಉದ್ಯೋಗ ಸಿಗುತ್ತದೆ. ನಿಮಗೆ ಡೌರಿ ನೀಡಿದ್ದೇನಲ್ಲಾ…. ಅದನ್ನೆಲ್ಲಾ ವಾಪಾಸ್ ಕೊಡಿರಿ…. ಮಾತನಾಡಿದ್ದಳು. ನಿಜವಾಗಿಯೂ ನನ್ನ ಸೊಸೆ ಒಳ್ಳೆಯ ವಳೇ ಆದ್ರೆ… ಈ ಅಕ್ಕ ಎಂಬ ಭೂತ ಬಂದು ಆಕೆಯ ಮನಸ್ಸನ್ನು ಹಾಳು ಮಾಡಿ ದಾಗಲೆಲ್ಲಾ ಈಕೆಯೂ ಬದಲಾಗುತ್ತಾಳೆ. ದಯಮಾಡಿ, ನನ್ನ ಸೊಸೆಗೆ ಎರಡು ಬುದ್ದಿ ಮಾತು ಹೇಳಿರಿ.

ಸಾಂತ್ವನ: ಸಹೋದರಿ… ಒಂದು ಹೆಣ್ಣು ಮಗಳು ತವರಿನಲ್ಲಿ ಹೆತ್ತವರೊಂದಿಗೆ ಬಾಳುವುದಕ್ಕಿಂತಲೂ ಅಧಿಕ ವರ್ಷಗಳನ್ನು ಪತಿಯೊಂದಿಗೆ ಕಳೆಯುತ್ತಾಳೆ. ಪತಿಯ ಮನೆಯಲ್ಲಿ ಹೆಣ್ಣು ಸುಖ ಅನುಭವಿಸುತ್ತಾಳೆ. ಓರ್ವ ಅತ್ತೆಯು ತನ್ನ ಮಗನಿಗೆ ಹೆಣ್ಣು ನೋಡುವಾಗ, ಬಹಳಷ್ಟು ಕನಸು ಕಂಡಿರುತ್ತಾಳೆ. ಮನಸ್ಸಿನೊಳಗೆ ಒಂದು ವಿಧದ ಹೆದರಿಕೆಯೂ ಮೂಡಿರುತ್ತದೆ.

ಸೊಸೆಯಾಗಿ ಬರುವಾಕೆ ಯಾವ ಗುಣ-ವರ್ತನೆ ಯವಳೋ…. ಮನೆಯ ಬೆಳಕಾಗುವಳೋ… ಕತ್ತಳಾಗುವಳೋ… ಎಂಬ ಚಿಂತೆ ತಾಯಿಗೆ ಇರುತ್ತದೆ. ಇಂದಿನ ಆಧುನಿಕ ಕಾಲದಲ್ಲಿ ಒಳ್ಳೆಯ ಗುಣ-ನಡತೆಯ, ಹೊಂದಾಣಿಕೆಯ ಸೊಸೆ ಸಿಕ್ಕಿದರೆ ಅದು ಆ ಅತ್ತೆಯ ಭಾಗ ಎಂದೇ ಹೇಳಬಹುದು. ನಿಮ್ಮ ಸೊಸೆಗೆ ಅಕ್ಕನ ಪ್ರಚೋದನೆಯೇ ಹಾಳು ಮಾಡುತ್ತಿರ ಬಹುದು. ಹೆಚ್ಚಿನ ಸುಖೀ ದಾಂಪತ್ಯ ಹಾಳಾಗುವುದೇ ಮೂರನೇ ವ್ಯಕ್ತಿಗಳಿಂದ. ಅದು ತಾಯಿ, ತಂಗಿ, ಅಕ್ಕ, ಗೆಳತಿ, ಚಿಕ್ಕಮ್ಮ…ಈ ಬಗೆಯ ಜನರಿಂದಾಗಿ ಕೆಲವು ವೇಳೆ ನೆರಕರೆಯ ಮಹಿಳೆಯರೂ – ಅತ್ತೆ-ಸೊಸೆಯ ಬಾಂಧವ್ಯಕ್ಕೆ ಹುಳಿ ಹಿಂಡುತ್ತಾರೆ.

ನಿಮ್ಮ ಸೊಸೆಯ ಅಕ್ಕನ ದಾಂಪತ್ಯ ಸುಖವಾಗಿಲ್ಲ. ಆಕೆಗೆ ಮಕ್ಕಳೂ ಬೇಡಾ…. ಆದ್ದರಿಂದ ತಂಗಿಗೆ ತನಗಿಂತ ಮೊದಲೇ ಮಕ್ಕಳಾಗದಿರಲಿ ಎಂಬ ಸ್ವಾರ್ಥ ಭಾವನೆಯೂ ಆಕೆಯಲ್ಲಿರಬಹುದು. ಕೆಲವೊಮ್ಮೆ ತಾವು ಪಡೆಯದ್ದನ್ನು ಇತರರು ಪಡೆಯಬಾರದೆಂಬ ಕೆಟ್ಟ ಚಿಂತನೆ ಇರುತ್ತದೆ. ಮಕ್ಕಳನ್ನು ಬೇಗ ಪಡೆಯುವುದು ಬೇಡವೆಂದು ಕೆಲವು ನವ ವಿವಾಹಿತರು ಸಂತಾನವನ್ನು ತಡೆಯುವ ಹಲವು ವಿಧಾನವನ್ನು ಅನುಸರಿಸುತ್ತಾರೆ. ಕೊನೆಗೆ ಅವರಿಗೆ ಮಗು ಬೇಕೆನಿಸಿದಾಗ ಮಗುವಿನ ಭಾಗವೇ ಇರುವುದಿಲ್ಲ.

ಮಕ್ಕಳು ದೇವನ ಅನುಗ್ರಹವಾಗಿದೆ. ಮೊದಲ ಮಗುವನ್ನು ತಡೆಯುವ ವಿಧಾನ ಮಾಡದಿರುವುದೇ ಒಳ್ಳೆಯದೆಂದು ನನ್ನ ಅಭಿಪ್ರಾಯ. ನಿಮ್ಮ ಸೊಸೆಗೆ ಅತ್ತೆ, ಪತಿಯ ಕನಸನ್ನು ಈಡೇರಿಸುವುದು ಮುಖ್ಯ. ದುಃಖ ಬಂದಾಗ ಯಾರೂ ಪಾಲು ವಹಿಸಲು ಬರುವುದಿಲ್ಲ. ಸುಖದಲ್ಲಿ ಎಲ್ಲರೂ ಹತ್ತಿರವಿರುತ್ತಾರೆ. ವಿದ್ಯಾವಂತಳು ಎಂಬುದು ಡಿಗ್ರಿಯ ಮಾರ್ಕ್‌ನಲ್ಲಿ ಇರುವುದಲ್ಲ. ಆಕೆಯ ಸಂಸ್ಕಾರ, ಬುದ್ದಿ, ವಿವೇಚನೆಯಲ್ಲಿ ವಿದ್ಯಾ ವಂತೆ ಅನಿಸಿಕೊಳ್ಳಬೇಕು. ಎಷ್ಟೇ ವಿದ್ಯೆ ಇದ್ದರೂ ನಾಲಗೆ ಮತ್ತು ಮನಸ್ಸು ಕೆಟ್ಟದಾಗಿ ದ್ದರೆ ಆ ವಿದ್ಯೆಗೆ ಒಂದು ಹನಿ ಬೆಲೆಯೂ ಇರದು. ಪತಿಯನ್ನು ತೊರೆಯುವುದು ಸುಲಭ. ಆದ್ರೆ….. ನಂತರದ ಬದುಕನ್ನು ಕಟ್ಟಿಕೊಳ್ಳು ವುದೇ ಕಷ್ಟ. ಉದ್ಯೋಗ ಖಂಡಿತಾ ಸಿಗ ಬಹುದು. ಆದ್ರೆ… ಗಂಡನನ್ನು ತೊರೆದವ ಳೆಂಬ ಟೀಕೆ ಆಕೆಯ ನೆರಳಾಗಿ ಬರುತ್ತದೆ. ಗಂಡಸರು ಏನು ಮಾಡಿದರೂ ಕೆಟ್ಟವನಾಗಿ ಕಾಣಿಸುವುದಿಲ್ಲ. ಹೆಣ್ಣು ಮಕ್ಕಳಿಗೆ ಅಪವಾದ, ಆರೋಪದ ಲೇಬಲ್ ಹೆಚ್ಚಲು ಈ ಸಮಾಜ ಸದಾ ಮುಂದಿರುತ್ತದೆ. ದಾಂಪತ್ಯದ ಸುಖ ಸಂತೋಷ ಮಹಿಳೆಯ ಕೈಯಲ್ಲಿದೆ. ಆಕೆ ಮನೆಗೆ ಬೆಳಕಾಗಬೇಕು.

ಅತ್ತೆಯು ಬೈದರೆ ಅದನ್ನು ಗಂಭೀರವಾಗಿ ಭಾವಿಸಬಾರದು. ಯಾಕೆಂದರೆ, ಹೆತ್ತ ತಾಯಿ ಬೈದರೆ ನಾವು ಅದನ್ನು ಮನಸ್ಸಿಗೆ ಹಚ್ಚಿಕೊಳ್ಳುವುದಿಲ್ಲ. ಮರೆತೇ ಬಿಡುತ್ತೇವೆ. ಹಾಗಾದರೆ ಅತ್ತೆಯ ಮಾತನ್ನೇಕೆ ಮನಸ್ಸಿಗೆ ತಗೊಳ್ಳುವುದು? ಪತಿಯ ಕುಂದು ಕೊರತೆಯ ದೂರನ್ನು ಸೊಸೆ ಅತ್ತೆಗೆ ತಿಳಿಸಬೇಕೇ ಹೊರತು ತನ್ನ ತಾಯಿಗೆ ತಿಳಿಸುವುದು, ಅತ್ತೆಯು ಸೊಸೆಗೆ ಸಾಂತ್ವನ ಹೇಳಿ ಮಗನಿಗೆ ಬುದ್ದಿ ಹೇಳಬೇಕೇ ಹೊರತು ಸೊಸೆಯನ್ನು ನಿಂದಿಸಬಾರದು. ಅತ್ತೆ-ಸೊಸೆ ಒಂದಾಗಿದ್ದರೆ ನೆಮ್ಮದಿಯೂ ಅಲ್ಲೇ ಇರುತ್ತದೆ. ಮೂರನೇ ವ್ಯಕ್ತಿಗಳ ಮಾತು ಕೇಳಿ ಸಂಸಾರವನ್ನು ಹಾಳು ಮಾಡಿ ಕೊಳ್ಳಬೇಡಿರಿ.

Leave a Reply