ಬೀದಿಯಲ್ಲಿ ಅಲೆದಾಡುತ್ತಿದ್ದ ದನವೊಂದರಿಂದ ತಿವಿತಕ್ಕೊಳಗಾದ ಗುಜರಾತ್ ನ ಬಿ.ಜೆ.ಪಿ ಯ ಸಂಸದರೊಬ್ಬರ ಸ್ಥಿತಿ ಚಿಂತಾಜನಕವಾಗಿದ್ದು ಅವರನ್ನು ತೀವ್ರ ಘಟಕದಲ್ಲಿರಿಸಲಾಗಿದೆ. ಪಠಾಣ್ ಲೋಕಸಭಾ ಕ್ಷೇತ್ರದ ಸದಸ್ಯರಾದ ಲೀಲಾಧರ್ ವಘೇಲಾ(83) ನಿನ್ನೆ ಗಾಂಧಿ ನಗರದ ದನವೊಂದರ ದಾಳಿಗೆ ತುತ್ತಾಗಿದ್ದರು.

ಲೋಕಸಭೆಗೆ ಚುನಾಯಿತರಾಗುವ ಮೊದಲು ವಘೇಲಾ ರವರು ಗುಜರಾತ್ನಲ್ಲಿ ಕ್ಯಾಬಿನೆಟ್ ಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು.

ಸೊಂಟ ಮತ್ತು ತಲೆಗೆ ಗಂಭೀರ ಗಾಯವಾದ ಸಂಸದರನ್ನು ಅಪೋಲೋ ಆಸ್ಪತ್ರೆಗೆ ದಾಖಲಿಸಿ ತೀವ್ರ ನಿಗಾ ಘಟಕದಲ್ಲಿರಿಸಲಾಗಿದೆ. ಇತ್ತೀಚೆಗೆ ಬೀದಿ ದನವೊಂದರ ಉಪಟಳದಿಂದ ರಕ್ಷಣೆ ಹೊಂದಲು ಪರಿಹಾರ ಕಂಡು ಹಿಡಿಯಬೇಕೆಂದು ಸರಕಾರಕ್ಕೆ ಹೈಕೋರ್ಟು ಆದೇಶಿಸಿತ್ತು.

Leave a Reply