ಆಂದ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್.ಟಿ. ರಾಮರಾವ್ ರ ಪುತ್ರ ನಟ, ಮಾಜಿ ಸಚಿವ ನಂದಮೂರಿ ಹರಿಕೃಷ್ಣ ಮೃತ ಶರೀರದ ಮುಂದೆ ನಿಂತು ಸೆಲ್ಫಿ ತೆಗೆದ ನಾಲ್ವರು ನರ್ಸುಗಳನ್ನು ಆಸ್ಪತ್ರೆಯ ವ್ಯವಸ್ಥಾಪಕರು ಆಸ್ಪತ್ರೆಯ ಕೆಲಸದಿಂದ ಡಿಬಾರ್ ಮಾಡಿದ್ದಾರೆ. ನಲ್ಗೊಂಡ ಕಾಮಿನೇನಿ ಸ್ಪೆಶಾಲಿಟಿ ಆಸ್ಪತ್ರೆಯಲ್ಲಿ ಇವರು ಕೆಲಸ ಮಾಡುತ್ತಿದ್ದರು.
ಹರಿಕೃಷ್ಣರ ಮೃತದೇಹದ ಮರಣೋತ್ತರ ಪರೀಕ್ಷೆಗೆ ಸಂದರ್ಭದಲ್ಲಿ ಈ ನರ್ಸುಗಳು ಮುಗುಳ್ನಗುತ್ತಾ ಫೋಟೋ ತೆಗೆಸಿಕೊಂಡಿದ್ದರು. ಈ ದೃಶ್ಯ ವೈರಲಾಗುವುದರೊಂದಿಗೆ ಇವರ ನೌಕರಿಗೆ ಕುತ್ತಾಯಿತು. ತೆಲಂಗಾಣ ಮತ್ತು ಆಂದ್ರ ಪ್ರದೇಶದಲ್ಲಿ ಈ ಚಿತ್ರದ ವಿರುದ್ಧ ತೀವ್ರ ಪ್ರತಿಭಟನೆ ವ್ಯಕ್ತವಾಯಿತು.
ಘಟನೆಯಿಂದ ಆಸ್ಪತ್ರೆಯು ನಾಚಿ ತಲೆ ತಗ್ಗಿಸುವಂತಾಗಿದ್ದು ಇದು ಮನುಷ್ಯತ್ವ ರಹಿತವಾದ ಕೃತ್ಯವೆಂದು ಆಸ್ಪತ್ರೆಯ ಆಡಳಿತ ಮಂಡಳಿ ಸ್ಪಷ್ಟ ಪಡಿಸಿ ಈ ನೌಕರರನ್ನು ವಜಾ ಕೆಲಸದಿಂದಲೇ ವಜಾ ಮಾಡಿತ್ತು.