ಈ ದೃಶ್ಯಗಳನ್ನೊಮ್ಮೆ ವೀಕ್ಷಿಸಿ. 90 ವರ್ಷದ ತಂಗಮ್ಮ ಎಂಬ ಮಾತೆಯೋರ್ವರ ಮನೆಯೆಂಬ ಕನಸಿನ ಕತೆ. 16 ವರ್ಷ ವಯಸ್ಸಿನವರಾಗಿದ್ದಾಗ ಅವರು ತನ್ನ ಕನಸಿನ ಮನೆ ನಿರ್ಮಾಣ ಮಾಡಲು ತೊಡಗಿದ್ದರು. ಫ್ಲೆಕ್ಸ್ ಗಳಿಂದ ನಿರ್ಮಿಸಿದ ಈ ಗುಡಿಸಲಿನಲ್ಲಿ ಪ್ರವಾಹದ ನೀರು ನುಗ್ಗಿತ್ತು. ನೆರೆ ಇಳಿದ ಬಳಿಕ ಒಂಬತ್ತು ಜನರಿರುವ ಈ ಕುಟುಂಬಕ್ಕೆ ಮಲಗಿ ನಿದ್ರಿಸಲು ಕೂಡಾ ಸ್ಥಳವಿಲ್ಲದ ದುರಂತ ಸ್ಥಿತಿಗೆ ತಲುಪಿದ್ದಾರೆ.

ತನ್ನ ಮನೆಮಂದಿ ಬೀದಿ ಪಾಲಾಗುವರು ಎಂಬ ಬೇಸರ ಆ ಅಮ್ಮನಿಗೆ.
“ನಾನು ಮರಣ ಹೊಂದುವುದಕ್ಕಿಂತ ಮುಂಚೆ ಒಂದು ಮನೆ ಆದರೆ ಒಳ್ಳೆಯದು. ನಾನು ಮರಣ ಹೊಂದಿದರೆ ನನ್ನ ಮಕ್ಕಳ ಅವಸ್ಥೆ ಬಗ್ಗೆ ಚಿಂತಿಸುವಾಗ ನನಗೆ ಬೇಸರ ಆಗುತ್ತದೆ” ಎಂದು ತಂಗಮ್ಮ ಹೇಳುತ್ತಾರೆ. ಈ ಕುಟುಂಬ ಆರ್ಥಿಕವಾಗಿ ಸಂಕಷ್ಟವನ್ನು ಎದುರಿಸುತ್ತಿದೆ ಎಂದು ಮೀಡಿಯಾ ಒನ್ ವರದಿ ಮಾಡಿದೆ.

Leave a Reply