ಶ್ರೀನಗರ : ಕೆಲವರು ತಮ್ಮ ಕರ್ತವ್ಯವನ್ನು ಬಹಳ ಶ್ರದ್ಧೆಯಿಂದ ನಿರ್ವಹಿಸುತ್ತಾರೆ. ಎಷ್ಟೇ ಕಷ್ಟ ಬಂದರೂ ತನ್ನ ಕರ್ತವ್ಯಕ್ಕೆ ಚ್ಯುತಿ ಬರಬಾರದು ಎಂಬ ನಿಯಮವನ್ನು ಜೀವನದಲ್ಲಿ ಅಳವಡಿಸಿರುತ್ತಾರೆ. ಇತ್ತೀಚೆಗೆ ಅಂತಹ ಒಬ್ಬ ಸಿಆರ್ಪಿಎಫ್ ಜವಾನರೊಬ್ಬರ ಕರ್ತವ್ಯ ನಿಷ್ಠೆಗೆ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಪ್ರಶಂಸೆ ವ್ಯಕ್ತವಾಗಿದೆ. ಜಮ್ಮು-ಕಾಶ್ಮೀರದ ಕಣಿವೆಯಲ್ಲಿ ತೀವ್ರ ಹಿಮಪಾತದ ನಡುವೆಯೂ ಕೂಡ ಯೋಧ ಕರ್ತವ್ಯ ನಿರ್ವಹಿಸುತ್ತಿದ್ದುದು ವಿಶೇಷವಾಗಿತ್ತು.

ಇದೀಗ ಕಾಶ್ಮೀರ ಕಣಿವೆಯಲ್ಲಿ ಹಿಮಪಾತದ ಋತು. ವರದಿಗಳ ಪ್ರಕಾರ ಶ್ರೀನಗರದಲ್ಲಿ 2% ಡಿಗ್ರಿ ಹವಾಮಾನವಿದೆ. ಗುಲ್ಮಾರ್ಗ್, ಸೊನ್ಮಾರ್ಗ್, ಪಹಲ್ಗಮ್ ಮುಂತಾದ ಇಡೀ ಪ್ರದೇಶ ಹಿಮದಿಂದ ತಂಪಾಗಿದೆ. ಹಿಮಪಾತವು ನಗರದ ರಸ್ತೆ ಮತ್ತು ವಾಯು ಸಾರಿಗೆಯ ಮೇಲೆ ಕೂಡ ತೀವ್ರ ಪರಿಣಾಮವನ್ನು ಬೀರಿದೆ.

https://twitter.com/iamkash_kr/status/1192784580249411584

ಈ ಭಾರೀ ಹಿಮಪಾತದ ನಡುವೆಯೂ ಸಿಆರ್ಪಿಎಫ್ ಜವಾನ ಎಜಾಜ್ ತನ್ನ ಕರ್ತವ್ಯವನ್ನು ನಿರ್ವಹಿಸುತ್ತಿದ್ದರು. ಕಶ್ಯಪ್ ಕಡಗತ್ತೂರು ಎಂಬುವರು ಈ ಚಿತ್ರವನ್ನು ಟ್ವಿಟರ್ ನಲ್ಲಿ ಶೇರ್ ಮಾಡಿದ್ದು, ಇದು ಬ್ಯಾಟ್ ಮ್ಯಾನ್ ಅಲ್ಲ ಬದಲಾಗಿ ಸಿಆರ್ಪಿಎಫ್ನ ಕಾನ್ಸ್ಟೇಬಲ್ ಐಜಾಜ್. ಎಂದು ಬರೆದಿದ್ದಾರೆ. ಭಾರೀ ಹಿಮಪಾತದ ಹೊರತಾಗಿಯೂ ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಕಾಶ್ಮೀರದಲ್ಲಿ 24/7 ಸೇವೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸಿಆರ್‌ಪಿಎಫ್ ಎಂದರೆ ವೃತ್ತಿಪರತೆ ಎಂದು ಟ್ವೀಟ್ ಮಾಡಿದ್ದಾರೆ. ಈ ಫೋಟೋ ವನ್ನು ಸಾವಿರಾರು ಮಂದಿ retweet ಮಾಡಿದ್ದಾರೆ.

 

Leave a Reply