ಪೈನಾಪಲ್ ಪಾಯಸ ಬೇಕಾಗುವ ಸಾಮಗ್ರಿಗಳು:

ಪೈನಾಪಲ್- 1 (ಮಧ್ಯಮ ಗಾತ್ರದ್ದು),
ಅಕ್ಕಿ- 1/4 ಕಪ್,
ಸಕ್ಕರೆ- 6-8 ಟೀ.ಸ್ಪೂ.,
ತೆಂಗಿನಹಾಲು- ಪ್ರಥಮ ಹಾಲು 11/2 ಕಪ್,
ಎರಡನೆ ಹಾಲು- 4 ಕಪ್,
ಕಂಡೆನ್‍ಸ್‍ಡ್ ಮಿಲ್ಕ್- 2 ಟೀ.ಸ್ಪೂ.,
ತುಪ್ಪ, ಗೋಡಂಬಿ- ಅಗತ್ಯಕ್ಕೆ,
ಒಣದ್ರಾಕ್ಷಿ- ಅಗತ್ಯಕ್ಕೆ.

ತಯಾರಿಸುವ ವಿಧಾನ:

ಸಣ್ಣ ತುಂಡುಗಳಾಗಿ ಮಾಡಿದ ಪೈನಾಪಲ್ ಅನ್ನು ಕುಕ್ಕರಿನಲ್ಲಿ 4-5 ವಿಸಿಲ್ ಬರುವ ವರೆಗೆ ಬೇಯಿಸಿ. ಬೇಯಿಸಲು ನೀರು ಹಾಕ ಬೇಕಿಲ್ಲ. ಒಂದು ಹಿಡಿ ಅಕ್ಕಿಯನ್ನು ಬೇಯಿಸಿ ತೆಗೆದಿಡಿ. ತೆಂಗಿನ ತುರಿಯಿಂದ ಹಾಲನ್ನು ತೆಗೆದಿಡಿ. ತಳ ದಪ್ಪವಿರುವ ಪಾತ್ರೆಯನ್ನು ಬಿಸಿಮಾಡಿ ಸ್ವಲ್ಪ ತುಪ್ಪ ಸೇರಿಸಿ. ಬೇಯಿಸಿಟ್ಟ ಪೈನಾಪಲ್ ತುಂಡುಗಳನ್ನು ಸೇರಿಸಿ ನೀರು ಆವಿಯಾಗುವರೆಗೆ ಬೇಯಿಸಿ. ಸಕ್ಕರೆ ಸೇರಿಸಿ ಅದು ಕೂಡಾ ಆವಿಯಾಗುವ ವರೆಗೆ ಬೇಯಿಸಿ. ಮೆಲ್ಲ ಮೆಲ್ಲನೆ ತೆಂಗಿನ ಹಾಲು ಸೇರಿಸುತ್ತ ಬನ್ನಿ. ಚೆನ್ನಾಗಿ ದಪ್ಪವಾದಾಗ ಬೇಯಿಸಿಟ್ಟ ಅನ್ನ ಸೇರಿಸಿ. ಕನ್‍ಡೆನ್‍ಸರ್ ಮಿಲ್ಕ್ ಸೇರಿಸಿ ಕುದಿಯುವಾಗ ಒಲೆ ನಂದಿಸಿ ತುಪ್ಪದಲ್ಲಿ ಹುರಿದ ಗೋಡಂಬಿ, ಒಣದ್ರಾಕ್ಷೆ ಸೇರಿಸಿ.

Leave a Reply