Representational Image

ಒಬ್ಬ ಗಾಯಾಳು ಮಾನಸಿಕ ಅಸ್ವಸ್ಥನ ಜೀವ ಕಾಪಾಡಲು ರೈಲ್ವೆ ಚಾಲಕ ರೈಲನ್ನು ಒಂದು ಕಿಲೋಮೀಟರ್ ಹಿಂದಕ್ಕೆ ಚಲಾಯಿಸಿ ಮಾನವೀಯತೆ ಮೆರೆದ ಘಟನೆ ರಾಜಸ್ತಾನದಿಂದ ವರದಿಯಾಗಿದೆ. ರಾಜಸ್ತಾನದ ಕೋಟಾದ ಅಟ್ರು-ಸಾಲ್ಪುರಾ ರೈಲ್ವೆ ಮಾರ್ಗದಲ್ಲಿ ಈ ಘಟನೆ ನಡೆದಿದ್ದು, ಶುಕ್ರವಾರ, 4 ಗಂಟೆಗೆ 32 ವರ್ಷದ ರಾಜೇಂದ್ರ ಎನ್ನುವ ಮಾನಸಿಕ ಅಸ್ವಸ್ಥ ವ್ಯಕ್ತಿಯೊಬ್ಬ ರೈಲಿನಿಂದ ಹಾರಿದ್ದಾನೆ. ಅವನ ರಕ್ಷಣೆಗಾಗಿ ಸಹೋದರ ವಿನೋದ್ ಸಹ ಚಲಿಸುತ್ತಿದ್ದ ರೈಲಿನಿಂದ ಹಾರಿದ್ದಾನೆ.

“ನನ್ನ ತಂದೆಯ ಸೋದರ ಸಂಬಂಧಿ ರಾಜೇಂದ್ರ ವರ್ಮಾ ಮಧ್ಯಪ್ರದೇಶದ ಸತ್ನಾ ಜಿಲ್ಲೆಯಲ್ಲಿ ಕಾರ್ಮಿಕನಾಗಿ ನನ್ನೊಂದಿಗೆ ಕೆಲಸ ಮಾಡುತಿದ್ದರು. ಕಳೆದ ಐದು ದಿನಗಳಿಂದ ಅವರ ಮಾನಸಿಕ ಸ್ಥಿತಿ ಚೆನ್ನಾಗಿಲ್ಲ. ಸಿಕರ್ ಗೆ ಹೋಗುವಾಗ ಅವರ ಅರೋಗ್ಯ ಇನ್ನಷ್ಟು ಹದಗೆಟ್ಟಿತ್ತು, ಆದ್ದರಿಂದ ನಾವು ಜೈಪುರಕ್ಕೆ ಹೋಗಲು ತೀರ್ಮಾನಿಸಿದೆವು” ಎಂದು ರೈಲಿನಲ್ಲಿದ್ದ ಅವರ ಸಂಬಂಧಿಯೋರ್ವರು ಹೇಳಿದರು.ಬಳಿಕ ರೈಲು ಹಿಂದಕ್ಕೆ ಚಲಾಯಿಸಿದ್ದರಿಂದ ಆತನನ್ನು ಆಸ್ಪತ್ರೆಗೆ ಸೇರಿಸಲಾಯಿತು. ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

Leave a Reply