Representational Image

* ದಿನವೂ ಮುಂಜಾನೆ ಅರಿಶಿನದ ಪುಡಿಯನ್ನು ಬಿಸಿನೀರಿನೊಂದಿಗೆ ಕುಡಿದರೆ ನಮ್ಮ ಮನಸ್ಸು ಚೈತನ್ಯಭರಿತವಾಗಿರುತ್ತದೆ.

*ಹಾಲಿನೊಂದಿಗೆ ಅರಿಶಿನ ಪುಡಿಯನ್ನು ಬೆರೆಸಿ ಕುಡಿದರೆ ಶೀತ ಕಡಿಮೆಯಾಗುತ್ತದೆ.

* ಬಿಸಿನೀರಿನೊಂದಿಗೆ ಅರಿಶಿನ ಪುಡಿಯನ್ನು ಬೆರೆಸಿ ಕುಡಿದರೆ ಕೆಮ್ಮು ಕಡಿಮೆಯಾಗುತ್ತದೆ.

* ತುಳಸಿ ಎಲೆ, ಬೆಳ್ಳುಳ್ಳಿ ಹಾಗೂ ಅರಿಶಿನದ ಬೇರನ್ನು ಕುಟ್ಟಿ ತಿಂದರೆ ಬೇಗನೆ ಶೀತ ಕಡಿಮೆಯಾಗುತ್ತದೆ.

* ಅರಿಶಿನದ ಪುಡಿಯನ್ನು ಒಂದು ಚಮಚ ಹಾಲು ಅಥವಾ ಬಿಸಿನೀರಿನೊಂದಿಗೆ ಕುಡಿದರೆ ಶೀಘ್ರದಲ್ಲಿಯೇ ತಲೆನೋವು ನಿವಾರಣೆಯಾಗುತ್ತದೆ.

* ದಿನವೂ ಮುಂಜಾನೆ ಅರಿಶಿನದ ಪುಡಿಯನ್ನು ಬಿಸಿನೀರಿನೊಂದಿಗೆ ಒಂದು ಬೆಳ್ಳುಳ್ಳಿ ಹಾಕಿ ಹತ್ತು ನಿಮಿಷ ಬಿಟ್ಟು ಕುಡಿಯುತ್ತಿದ್ದರೆ ನಮ್ಮ ತೂಕವನ್ನು ಕೂಡಾ ಕಡಿಮೆ ಮಾಡಿಕೊಳ್ಳಬಹುದು.

* ಅರಿಶಿನದ ಪುಡಿಯನ್ನು ಬಿಸಿನೀರಿನೊಂದಿಗೆ ಕುಡಿದರೆ ಗಂಟಲಿನ ಕೆರೆತ ಕಡಿಮೆಯಾಗುತ್ತದೆ.

* ದಿನವೂ ಊಟದಲ್ಲಿ ಅರಿಶಿನವನ್ನು ಬಳಸುವುದರಿಂದ ಕ್ಯಾನ್ಸರ್ ಬರುವುದನ್ನು ತಡೆಗಟ್ಟಬಹುದು.

* ಅರಿಶಿನದಲ್ಲಿ ಆ್ಯಂಟಿಸೆಪ್ಟಿಕ್ ಗುಣ ಇರುವುದರಿಂದ ನಮಗೆ ಗಾಯವಾದಾಗ ಅರಿಶಿನದ ಪುಡಿಯನ್ನು ಮೊದಲು ಲೇಪಿಸಿದರೆ ಬೇಗನೆ ಗಾಯ ವಾಸಿಯಾಗುತ್ತದೆ.

* ಅರಿಶಿನದಲ್ಲಿ ಕುಕ್ಕ್ಯೂರ್ಮಿನ್ ಅಂಶವಿರುವುದರಿಂದ ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆಗಾಗಿ ಬಳಸಲಾಗುತ್ತದೆ.

* ಮಕ್ಕಳಿಗೆ ನೆಗಡಿ, ಕೆಮ್ಮು ಬಂದಾಗ ಅರಿಶಿನ – ಪುಡಿಯನ್ನು ಬೆರೆಸಿ ಹಾಲನ್ನು ಕುಡಿಸಿದರೆ ಕಡಿಮೆಯಾಗುತ್ತದೆ.

* ಅರಿಶಿನ ಬೇರನ್ನು ತೇಯ್ದು ಅದರ ರಸವನ್ನು ಮುಖಕ್ಕೆ ರಾತ್ರಿ ಮಲಗುವ ಮುನ್ನ ಹಚ್ಚಿ ಮುಂಜಾನೆ ತೊಳೆದುಕೊಂಡರೆ ಮುಖದಲ್ಲಿರುವ ಕಲೆಗಳು ಹೋಗುತ್ತವೆ.

* ಹಾಲಿನೊಂದಿಗೆ ಒಂದು ಚಮಚ ಅರಿಶಿಣದ ಪುಡಿಯನ್ನು ಬೆರೆಸಿ ಮುಖಕ್ಕೆ ಹಚ್ಚಿದರೆ ಮೊಡವೆಗಳು ಕಡಿಮೆಯಾಗುತ್ತವೆ. ಉತ್ತಮ ಫಲಿತಾಂಶ ಬರುತ್ತದೆ.

* ಒಂದಿಲ್ಲೊಂದು ರೀತಿಯಲ್ಲಿ ಅರಿಶಿನಬಳಸಿ ನಮ್ಮ ಆರೋಗ್ಯವನ್ನು ರಕ್ಷಿಸಿಕೊಳ್ಳಬಹುದಾಗಿದೆ.

Leave a Reply