unsplash/Representative

ಇದು ನಮ್ಮ ಊರು: ಕೊರೋನಾ ಸಾಂಕ್ರಾಮಿಕ ವೈರಸ್ ಇಡೀ ಜಗತ್ತಿನ ವ್ಯವಸ್ಥೆಯನ್ನೇ ಬದಲಾಯಿಸಿದೆ. ಹಲವಾರು ವ್ಯಪಾರ ವಹಿವಾಟುಗಳು ಇದರಿಂದ ಸ್ಥಗಿತಗೊಂಡಿದೆ. ರೋಗ ಭಯ ಆರ್ಥಿಕ ಹಿಂಜರಿತ ಮತ್ತು ಇನ್ನಿತರ ಸಂಕಷ್ಟಗಳಿಂದ ಜನ ತತ್ತರಿಸಿ ಹೋಗಿದ್ದಾರೆ.

ಇಂತಹ ಸನ್ನಿವೇಶದಲ್ಲಿ ಸಿಂಗಾಪುರ ಸರಕಾರ ಒಂದು ಭರ್ಜರಿ ಆಫರ್ ಕೊಟ್ಟಿದೆ. ದೇಶದಲ್ಲಿ ಆರ್ಥಿಕ ಕುಸಿತದಿಂದ ಮಕ್ಕಳನ್ನು ಹೊಂದುವ ಯೋಜನೆ ಕೈಬಿಟ್ಟ ಪೋಷಕರಿಗೆ ಸರಕಾರವು ಈ ಆಫರ್ ನೀಡಿದೆ. ಒಂದು ವೇಳೆ ಪೋಷಕರು ಮಕ್ಕಳನ್ನು ಮಾಡಿದರೆ ಅವರಿಗೆ ಬೋನಸ್ ಸಿಗಲಿದೆ ಎಂದು ಸಿಂಗಾಪುರ್ ಅಧಿಕಾರಿ ತಿಳಿಸಿದ್ದಾರೆ. ಸಿಎನ್ಎನ್ ವರದಿಯ ಪ್ರಕಾರ, ಸಿಂಗಾಪುರದ ಉಪ ಪ್ರಧಾನ ಮಂತ್ರಿ ಹೆಂಗ್ ಸ್ವೀ ಕೇಟ್ ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಪೋಷಕರಾಗಲು ಸಮಸ್ಯೆಗಳನ್ನು ಎದುರಿಸುತ್ತಿರುವವರಿಗೆ ಉತ್ತೇಜಿಸುವ ಸಲುವಾಗಿ ಈ ಬೋನಸ್ ಮೊತ್ತವನ್ನು ಘೋಷಿಸಿದ್ದಾರೆ. ಆದರೆ ಬೋನಸ್ ಮೊತ್ತ ಎಷ್ಟು ಎಂದು ಇನ್ನೂ ನಿರ್ಧರಿಸಲಾಗಿಲ್ಲ.

ಕೊರೊನೊ ವೈರಸ್ ಭಾರತ ಸೇರಿದಂತೆ ವಿಶ್ವದ ಪ್ರಮುಖ ಆರ್ಥಿಕತೆಗಳ ಮೇಲೆ ತೀವ್ರ ಪರಿಣಾಮ ಬೀರಿದೆ. ಈ ಸಮಯದಲ್ಲಿ, ಸಿಂಗಪುರದ ಉಪ ಪ್ರಧಾನ ಮಂತ್ರಿ ಆರ್ಥಿಕ ಬಿಕ್ಕಟ್ಟಿನಿಂದಾಗಿ ಅನೇಕ ಆಸಕ್ತ ಪೋಷಕರು ತಮ್ಮ ಕುಟುಂಬ ಯೋಜನೆಯನ್ನು ಮುಂದೂಡಬೇಕಾಯಿತು ಎಂದು ಹೇಳಿದರು. ಆದ್ದರಿಂದ, ಈ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಅಂತಹ ಜನರಿಗೆ ಸರ್ಕಾರ ನೆರವು ನೀಡುತ್ತದೆ.

ಸಿಂಗಾಪುರವು ವಿಶ್ವದಲ್ಲೇ ಅತಿ ಕಡಿಮೆ ಜನನ ಪ್ರಮಾಣವನ್ನು ಹೊಂದಿರುವುದರಿಂದ, ಈ ಸಂಖ್ಯೆಯನ್ನು ಹೆಚ್ಚಿಸಲು ಸರ್ಕಾರ ನಿರಂತರವಾಗಿ ಪ್ರಯತ್ನಿಸುತ್ತಿದೆ.

Leave a Reply