ಇದುನಮ್ಮಊರು : ನಾವಿಬ್ಬರು ನಮಗಿಬ್ಬರು ಎಂಬ ಸಂದೇಶಕ್ಕೆ ಹೊರತಾಗಿ ನಾವಿಬ್ಬರು ನಮಗೊಂದು ಮಗು ಎಂದು ಹೇಳಲು ಪ್ರಾರಂಭವಾಯಿತು. ಆದರೂ ಹಿಂದಿನ ಕಾಲಕ್ಕೆ ಹೋಲಿಸಿದರೆ ಇಂದು ದಂಪತಿಗಳು ಕಡಿಮೆ ಮಕ್ಕಳನ್ನು ಬಯಸುತ್ತಾರೆ. ಇದಕ್ಕೆ ಅದರದೇ ಆದ ಕೆಲವು ಕಾರಣಗಳೂ ಇವೆ.
ಹೆಚ್ಚು ಮಕ್ಕಳ ಬಗ್ಗೆ ಮಾತನಾಡುವಾಗ ಜನರು ಹಿಂದಿನ ಕಾಲದ ಅಜ್ಜಿಯ ನೆನಪು ಮಾಡಿಕೊಳ್ಳುತ್ತಾರೆ. ಒಬ್ಬೊಬ್ಬರು 10 ಅಥವಾ 12 ಮಕ್ಕಳನ್ನು ಹೆರುತ್ತಿದ್ದರು. ಅದೇ ಸಂದರ್ಭದಲ್ಲಿ ಇಲ್ಲೊಬ್ಬರು ತಾಯಿ ಈ ಕಾಲದಲ್ಲೂ ತನಗೆ 12 ಮಕ್ಕಳು ಬೇಕು ಎಂದು ಈಗಾಗಲೇ 10 ಮಕ್ಕಳಿಗೆ ಜನ್ಮ ನೀಡಿದ್ದಾರೆ. ಈ ಮಹಿಳೆಯ ಹೆಸರು ಕರ್ಟ್ನಿ ರೋಜರ್ಸ್. ಹತ್ತು ವರ್ಷಗಳ ಅವಧಿಯಲ್ಲಿ ಹತ್ತು ಮಕ್ಕಳನ್ನು ಹೊಂದಿದ್ದು, ಅವರು ನಿಲ್ಲಿಸುವ ಮನಸ್ಥಿತಿಯಲ್ಲಿಲ್ಲ.
lovewhatmatters/Courtney Rogers
ಕರ್ಟ್ನಿ ಮತ್ತು ಅವರ ಪತಿ ಕ್ರಿಸ್ ರೋಜರ್ಸ್ 2008 ರಲ್ಲಿ ವಿವಾಹವಾದರು. ಅವರು 2010 ರಲ್ಲಿ ತಮ್ಮ ಮೊದಲ ಮಗುವನ್ನು ಪಡೆದರು. ಅಂದಿನಿಂದ ಕರ್ಟ್ನಿ ಒಂಬತ್ತು ಬಾರಿ ಗರ್ಭಿಣಿಯಾಗಿದ್ದಾಳೆ. ಈ ಮಹಿಳೆ ತುಂಬಾ ಧೈರ್ಯ ಶಾಲಿ ಹಾಗೂ ತನ್ನ ಹನ್ನೊಂದನೇ ಮಗುವಿಗಾಗಿ ಕಾಯುತ್ತಿದ್ದಾರೆ. ನವೆಂಬರ್ 19ಕ್ಕೆ ತನ್ನ 11 ನೇ ಮಗುವನ್ನು ನಿರೀಕ್ಷಿಸುತ್ತಿದ್ದಾರೆ. ಈಗ ಕರ್ಟ್ನಿ ಮತ್ತು ಕ್ರಿಸ್ ದಂಪತಿಗಳಿಗೆ ಆರು ಹುಡುಗರು ಮತ್ತು ನಾಲ್ಕು ಹುಡುಗಿಯರು. ಕುತೂಹಲಕಾರಿ ಸಂಗತಿಯೆಂದರೆ ಮನೆಯಲ್ಲಿ ಪ್ರತಿಯೊಬ್ಬರ ಹೆಸರು “ಸಿ” ಯಿಂದ ಪ್ರಾರಂಭವಾಗುತ್ತದೆ.
ಮಕ್ಕಳ ಹೆಸರುಗಳು – Clint, Clay, Cade, Callie, Cash, twins Colt and Case, Calena, Caydue, Coralee.
The sun
ಕುಟುಂಬ ನಡೆಸುವುದು, ಮಕ್ಕಳ ಖರ್ಚು ವೆಚ್ಚಗಳು ಅಷ್ಟು ಸುಲಭದ ಕೆಲಸವಲ್ಲ. ಈ ನಿಟ್ಟಿನಲ್ಲಿ ಈ ದಂಪತಿಗಳು ತಮ್ಮ ಖರ್ಚು ವೆಚ್ಚಗಳನ್ನು ಆದಷ್ಟು ನಿಯಂತ್ರಿಸಲು ನೋಡಿಕೊಳ್ಳುತ್ತಾರೆ. “ನಮಗೆ 12 ಮಕ್ಕಳು ಬೇಕು, ಅಂದರೆ 14 ಜನರ ಕುಟುಂಬ. ನನ್ನ ಗಂಡನಿಗೂ 10 ಒಡಹುಟ್ಟಿದವರು ಇದ್ದಾರೆ. ನನ್ನ ಗಂಡನ ತಾಯಿಯಂತೆ ನಾನೂ ಹೆಚ್ಚು ಮಕ್ಕಳನ್ನು ಹೊಂದಬೇಕು ಎಂದು ಅವರು ಹೇಳುತ್ತಾರೆ.