ಈ ಲೋಕದಲ್ಲಿ ಬಹು ಅಮೂಲ್ಯ ವಾದುದು ಮಾನವ ಜೀವ. ಆದ್ದರಿಂದ ಅಪಘಾತಗಳಿಗೆ ಈಡಾಗಿ ಅಥವಾ ಇನ್ನಿತರ ಕಾರಣಗಳಿಂದ ಪ್ರಾಣಾಪಾಯ ಕ್ಕೊಳಗಾದ ಮಾನವ ಜೀವಕ್ಕೆ ಕೂಡಲೇ ನೀಡುವ ಕಿರು ಉಪಚಾರವೂ ವರವಾದೀತು. ಅಪಘಾತವಾಗಿ ಗಾಯಗಳಾ ದಾಗ ಆಸ್ಪತ್ರೆಗೆ ಸಾಗಿಸುವುದರ ಮೊದಲು ಮಾಡಬೇಕಾದ ತುರ್ತು ಉಪಚಾರ, ಚಿಕಿತ್ಸೆಯೇ `ಪ್ರಥಮ ಚಿಕಿತ್ಸೆ’.

ಪ್ರತಿಯೊಬ್ಬ ನಾಗರಿಕನೂ ಪ್ರಥಮ ಚಿಕಿತ್ಸೆಯ ಬಗ್ಗೆ ತಿಳಿದರೆ ಖಂಡಿತ ವಾಗಿಯೂ ಮುಳುಗುತ್ತಿರುವವನಿಗೆ ಮರದ ತುಂಡು ಅಸರೆಯಾದಂತೆ ಪ್ರಾಣಾಪಾಯ ದಲ್ಲಿರುವವರಿಗೆ ವೈದ್ಯರಿಗಿಂತಲೂ ಮುನ್ನ ಸ್ಥಳದಲ್ಲಿಯೇ ಸಿಗುವ ನೆರವು ಸಂಜೀವಿನಿ ಯಾದೀತು. ಪ್ರಥಮ ಚಿಕಿತ್ಸೆ ನೀಡುವವರು ಮೊದಲಿಗೆ ಕಡ್ಡಾಯವಾಗಿ ತಿಳಿದಿರಬೇಕಾ ದುದು ಮಾನವ ದೇಹದ ರಚನೆ. ಈ ಬಗ್ಗೆ ಅರಿವಿಲ್ಲದೇ ಎಂದೂ ಚಿಕಿತ್ಸೆ ನೀಡಬಾರದು. ಎಲ್ಲಿ ಏಟು ಬಿದ್ದಿದೆ, ಏನು ಮಾಡಬಹುದು ಎಂದು ಸುಲಭ ವಾಗಿ ನಿರ್ಧರಿಸಲು ದೇಹ ರಚನೆಯ ಬಗ್ಗೆ ತಿಳಿದಿರಲೇಬೇಕು. ಇದರಲ್ಲಿ ಬಹಳ ನಾಜೂಕಾಗಿರುವ ಅಂಗಗಳು: ಹೃದಯ, ಶ್ವಾಸಕೋಶಗಳು, ಬೆನ್ನುಮೂಳೆ…

ಹೃದಯವು ದೇಹದ ಪ್ರಮುಖ ಅಂಗವಾಗಿದೆ. 300 ಗ್ರಾಂ ತೂಕವಿರುವ ಹೃದಯದ ಗಾತ್ರ ಆತನ ಮುಷ್ಠಿಯಷ್ಟು. ಆರೋಗ್ಯವಂತನಲ್ಲಿ ನಿಮಿಷಕ್ಕೆ 72 ಬಾರಿ ಮಿಡಿಯುತ್ತಾ ದೇಹದ ಎಲ್ಲಾ ಭಾಗಗಳಿಗೆ ನಾಳಗಳ ಮೂಲಕ ರಕ್ತ ಸರಬರಾಜು ಮಾಡುತ್ತದೆ. ಇದರಲ್ಲಿ ತಡೆಯುಂಟಾದಾಗ ಅಥವಾ ತನ್ನ ಕಾರ್ಯದಲ್ಲಿ ದಕ್ಷತೆ ಕಳೆದುಕೊಂಡಾಗ ಹೃದಯ ಸ್ತಂಭನ ಕಾಣಿಸಿಕೊಳ್ಳುವುದು. ಹೀಗಾದಾಗ ಹೃದಯ ದಲ್ಲಿ ವಿಪರೀತ ನೋವು ಕಾಣಿಸುತ್ತದೆ. ಮುಖ ಬಿಳುಪೇರಿ, ದೇಹ ಬಳಲಿ ಕುಸಿದು ಬೀಳುವುದು ಅಥವಾ ರಕ್ತ ವಾಂತಿಯಾಗುವುದು. ಇಂತಹಾ ಸಂದರ್ಭ ದಲ್ಲಿ ರೋಗಿಯನ್ನು ಹೆಚ್ಚು ಅಲುಗಾಡಿಸದೇ ಕುಳಿತಲ್ಲಿಯೇ ಕೂರಿಸಿ, ಬಿಗಿಯಾಗಿದ್ದರೆ ಉಡುಪು ಸಡಿಲಿಸಿ. ಕೃತಕ ಹಲ್ಲುಗಳಿದ್ದರೆ ತೆಗೆದುಬಿಡಿ. ಅವರ ಬಳಿ ಹೃದ್ರೋಗಕ್ಕೆ ಬಳಸುವ ಮಾತ್ರೆ ಇದ್ದರೆ ನಾಲಗೆಯ ಅಡಿಯಲ್ಲಿ ಇಟ್ಟು ಬಿಡಿ. ಮೊದಲೇ ತರಬೇತು ಹೊಂದಿದ್ದು ಹೃದಯವನ್ನು ಹೊರಗಡೆಯಿಂದ ಪ್ರಚೋದಿಸಬೇಕು. ಇದಕ್ಕಾಗಿ ರೋಗಿಯನ್ನು ಮಲಗಿಸಿ ಎಡಭಾಗದಲ್ಲಿ ನಮ್ಮ ಮುಂಗಾಲು ಊರಿ ನಮ್ಮ ಬಲಗೈಯನ್ನು ಆತನ ಎದೆಯ ಮಧ್ಯೆ ಇಟ್ಟು ಅದರ ಮೇಲೆ ನಮ್ಮ ಇನ್ನೊಂದು ಕೈಯನ್ನು ಇಟ್ಟು ಸ್ವಲ್ಪ ಸ್ವಲ್ಪವೇ ಒತ್ತಿರಿ. ಈ ರೀತಿ ನಿಮಷಕ್ಕೆ 30 ಬಾರಿ ಮಾಡಿರಿ ಮತ್ತು ಆದಷ್ಟು ಬೇಗನೇ ವೈದ್ಯರ ಬಳಿ ಸಾಗಿಸಿರಿ.

ಶ್ವಾಸಕೋಶಗಳು ದೇಹದಲ್ಲಿ ಉಸಿ ರಾಟದ ಮುಖ್ಯ ಅಂಗಗಳು. ಉಸಿರಾಟ ಕ್ರಿಯೆಯಲ್ಲಿ ಮಾನವನ ಮೂಗು, ಗಂಟಲು, ಧ್ವನಿ ನಾಳ ಮತ್ತು ಶ್ವಾಸಕೋಶ ಗಳೂ ಒಳಗೊಂಡಿರುತ್ತವೆ. ವಾತಾವರಣ ದಲ್ಲಿರುವ ಗಾಳಿಯ ಆಮ್ಲಜನಕವನ್ನು ಮೂಗು, ಬಾಯಿಯ ಮುಖಾಂತರ ಎಳೆದುಕೊಂಡು ಶ್ವಾಸಕೋಶದೊಳಗೆ ಬರುವುದು. ಜೀವ ಕಣಗಳ ಸಹಾಯ ದಿಂದ ರಕ್ತವನ್ನು ಪ್ರವೇಶಿಸಿ, ರಕ್ತದಲ್ಲಿರುವ ಇಂಗಾಲಾಮ್ಲ(ಕಾರ್ಬನ್ ಡೈ ಆಕ್ಸೈಡ್) ವನ್ನು ಹೊರಕ್ಕೆ ಕಳುಹಿಸುವುದು. ವ್ಯಕ್ತಿ ಅಪಘಾತಕ್ಕೀಡಾದ ಸಂದರ್ಭ, ನೀರಿನಲ್ಲಿ ಮುಳುಗಿದಾಗ ಅಥವಾ ಇತರ ಯಾವುದೇ ಸಂದರ್ಭದಲ್ಲಿ ಉಸಿರಾಟದ ತೊಂದರೆ ಕಾಣಿಸಿಕೊಳ್ಳುವುದು. ಆ ಸಂದರ್ಭ ಆತನಿಗೆ ಕೃತಕವಾಗಿ ಉಸಿರು ನೀಡುತ್ತಾ ಉಸಿರಾಟ ಸುಸೂತ್ರವಾಗುವಂತೆ ನೋಡಿ ಕೊಳ್ಳಬೇಕು. ಇದಕ್ಕಾಗಿ ಸರಿಯಾದ ಗಾಳಿ ಬೆಳಕು ಇರುವ ಸ್ಥಳಕ್ಕೆ ಕರೆ ತನ್ನಿ. ನೀರಿನಲ್ಲಿ ಮುಳುಗಿದವರಿಗೆ ಮೊದಲು ಅವರು ಕುಡಿದ ನೀರನ್ನು ಹೊರತೆಗೆಯ ಬೇಕು. ಒದ್ದೆ ಬಟ್ಟೆ ತೆಗೆದು ಒಣ ಬಟ್ಟೆ ಅಥವಾ ಕಂಬಳಿ ಹೊದಿಸಿರಿ. ನೇಣು ಹಾಕಿಕೊಂಡಿರುವ ಸಂದರ್ಭವಾದಲ್ಲಿ ದೇಹ ವನ್ನು ಆ ಕೂಡಲೇ ಮೇಲಕ್ಕೆ ಸ್ವಲ್ಪ ಎತ್ತಿ. ಹಗ್ಗ ಸಡಿಲಿಸಿ ಅಥವಾ ತುಂಡರಿಸಿ ಕೃತಕ ಶ್ವಾಸ ನೀಡಿ ವೈದ್ಯರಲ್ಲಿ ಸಾಗಿಸಿರಿ. ಕಟ್ಟಡದೊಳಗಿನ ಹೊಗೆ, ವಿಷಾನಿಲ ಅಥವಾ ಸುರಂಗಗಳಲ್ಲಿ ಉಸಿರುಕಟ್ಟಿದ್ದರೆ ಮೊದಲು ಪ್ರಥಮ ಚಿಕಿತ್ಸಕರು ತಮ್ಮ ಬಾಯಿ ಮೂಗಿಗೆ ಒದ್ದೆ ಬಟ್ಟೆ ಕಟ್ಟಿಕೊಂಡು ನಂತರ ರೋಗಿಯನ್ನು ಅಲ್ಲಿಂದ ಹೊರ ತರಲು ಧಾವಿಸಿರಿ. ಚಿಕಿತ್ಸೆ ನೀಡಬೇಕಾದ ವ್ಯಕ್ತಿಯನ್ನು ನೆಲದ ಮೇಲೆ ಅಂಗಾತ ಮಲಗಿಸಿ, ಉಡುಪುಗಳನ್ನು (ಬಿಗಿಯಾಗಿ ದ್ದರೆ) ಸ್ವಲ್ಪ ಸಡಿಲಿಸಿ. ವ್ಯಕ್ತಿಯ ಬಾಯಿ ಮತ್ತು ಮೂಗನ್ನು ಸ್ವಚ್ಫ ಬಟ್ಟೆಯಿಂದ ಒರೆಸಿ, ಒಂದು ಕೈಯಲ್ಲಿ ವ್ಯಕ್ತಿಯ ಕುತ್ತಿಗೆಯನ್ನು ಎತ್ತಿ ಹಣೆಯನ್ನು ತಗ್ಗಿಸಿ ನಂತರ ಆತನ ಮೂಗನ್ನು ಮುಚ್ಚಿ ಅವನ ಬಾಯಿಗೆ ನಿಮ್ಮ ಬಾಯಿ ಇಟ್ಟು ದೊಡ್ಡ ಉಸಿರನ್ನು ನಿಧಾನವಾಗಿ ಎದೆ ಉಬ್ಬುವಂತೆ ಊದಿ. ನಂತರ ಬಾಯಿ ತೆಗೆದು ಆ ವ್ಯಕ್ತಿಯ ಎದೆಯಿಂದ ಉಸಿರು ಹೊರಬರುವಂತೆ ಪ್ರಯತ್ನಿಸಿ, ಮತ್ತೆ ನೀವು ಉಸಿರು ಎಳೆದುಕೊಂಡು ಊದಿ. ಈ ರೀತಿಯಾಗಿ ನಿಮಿಷಕ್ಕೆ 15-16 ಬಾರಿಯಂತೆ ಉಸಿರಾಟ ಸರಾಗವಾಗು ವವರೆಗೆ ಮಾಡುತ್ತಿರಬೇಕು. ಕೆಲವೊಮ್ಮೆ ಹೃದಯದ ಬಡಿತ ಇರುತ್ತದೆ. ಆದರೆ ಉಸಿರಾಟ ನಿಂತಿರುವ ವ್ಯಕ್ತಿಗೆ ಮೊದಲು ಈ ಮೇಲಿನಂತೆ ಕೃತಕ ಉಸಿರಾಟ ಮಾಡಿಸಬೇಕು. ಆಗ ಆ ವ್ಯಕ್ತಿಯ ದೇಹ ನೀಲಿ ಬಣ್ಣಕ್ಕೆ ತಿರುಗುತ್ತಿದ್ದರೂ ಕೃತಕ ಉಸಿರಾಟ ಮಾಡಿಸುವುದರಿಂದಾಗಿ ನೀಲಿ ಯಿಂದ ಕೆಂಪು ಬಣ್ಣಕ್ಕೆ ತಿರುಗುತ್ತದೆ. ಒಂದು ವೇಳೆ ವ್ಯಕ್ತಿಯ ಎದೆ ಉಬ್ಬದಿದ್ದರೆ, ಬಾಯಿಯಿಂದ ಗಾಳಿ ಹೊರ ಬೀಳದಿದ್ದರೆ, ಉಸಿರಾಟದ ಮಾರ್ಗದಲ್ಲಿ ಏನೋ ತಡೆ ಇದೆ ಎಂದು ತಿಳಿಯಬೇಕು. ಆಗ ಗಂಟಲಿನಲ್ಲಿ ವಸ್ತುವೇನಾದರೂ ಸಿಕ್ಕಿ ಬಿದ್ದಿರುವುದೋ ಎಂದು ಪರೀಕ್ಷಿಸಿ ಅಥವಾ ಬೋರಲು ಮಲಗಿಸಿ ಹೆಗಲಿನ ಎಲುಬು ಗಳಿಗೆ ಮತ್ತು ಬೆನ್ನಿನ ಮೇಲೆ 3-4 ಸಲ ನಿಧಾನವಾಗಿ ತಟ್ಟಿರಿ. ಅಥವಾ ಹೊಕ್ಕಳಿನ ಮೇಲಕ್ಕೆ ಹೊಟ್ಟೆಯನ್ನು ಎರಡೂ ಕೈ ಗಳಿಂದ ಬಲವಾಗಿ ಒತ್ತಿರಿ. ಈ ರೀತಿ ಯಿಂದಲೂ ಶ್ವಾಸಕೋಶದ ಗಾಳಿ ಹೊರ ಬೀಳುತ್ತದೆ. ಒಂದು ವೇಳೆ ವ್ಯಕ್ತಿಯ ಮುಖ ಸುಟ್ಟಿದ್ದು ಕೃತಕ ಉಸಿರಾಟದ ಅಗತ್ಯ ಬಿದ್ದಲ್ಲಿ ಹೆಗಲಿನ ಕೆಳಗೆ ಬಟ್ಟೆ ಮಡಚಿಟ್ಟು ಅಥವಾ ತಲೆದಿಂಬು ಇಟ್ಟು ಕುತ್ತಿಗೆಯನ್ನು ಎತ್ತಿ ಹಿಡಿದು ಆತನದೇ (ಆಕೆಯದೇ) ಮಣಿಕಟ್ಟನ್ನು ಅವನ ಎದೆಯ ಮಧ್ಯೆ ಇರಿಸಿ ಬಲವಾಗಿ ಒತ್ತುತ್ತಾ ಉಸಿರನ್ನು ಹೊರಡಿಸಿ. ನಂತರ ಕೈಗಳನ್ನು ಅಗಲವಾಗಿ ಹಿಂದಕ್ಕೂ, ಮುಂದಕ್ಕೂ ಆಡಿಸಿ. ನಿಮಿಷಕ್ಕೆ 12 ರಿಂದ 15 ಬಾರಿ ಹೀಗೆ ಮಾಡುತ್ತಾ ಉಸಿರಾಡುವವರೆಗೂ ಮುಂದುವರೆಸಿ. ಉಸಿರಾಟ ಆರಂಭವಾದರೆ ಪುನಃ ಕಡಿಮೆ ಆಗದಂತೆ ಎಚ್ಚರವಹಿಸಿ ಮತ್ತು ಇಬ್ಬರು ಪ್ರಥಮ ಚಿಕಿತ್ಸಕರಿದ್ದಲ್ಲಿ ಒಬ್ಬ ಬಾಯಿ ಮೂಲಕ ಕೃತಕ ಉಸಿರಾಟ ಒಂದು ಸಲ ಮಾಡಿಸುವಾಗ ಇನ್ನೊಬ್ಬ 5 ಬಾರಿ ಎದೆಯನ್ನು ಒತ್ತಬೇಕು. ಪುನಃ ಬಾಯಿಯ ಮೂಲಕ 1 ಬಾರಿ, ಪುನಃ 5 ಬಾರಿ ಎದೆಯನ್ನು ಒತ್ತುವುದು. ಆದರೆ ಈ 2 ಕೆಲಸಗಳು ಎಂದೂ ಒಮ್ಮೆಲೇ ಆಗ ಬಾರದು. ಪ್ರತೀ 2 ನಿಮಿಷಗಳಿಗೊಮ್ಮೆ ನಾಡಿ ಪರೀಕ್ಷಿಸುತ್ತಿರಬೇಕು. ನಂತರ ಬೇಗನೇ ಆಸ್ಪತ್ರೆಗೆ ಸಾಗಿಸುವ ವ್ಯವಸ್ಥೆ ಮಾಡಬೇಕು.
ಬೆನ್ನುಮೂಳೆ ಮತ್ತು ಇತರ ಮೂಳೆಗಳ ಒಟ್ಟಾದ ಆಕಾರವೇ ಅಸ್ತಿಪಂಜರ ನಮ್ಮ ದೇಹದಲ್ಲಿ ಸುಮಾರು 206 ಮೂಳೆಗಳಿದ್ದು ನಾಜೂಕಾದ ಅಂಗಗಳಿಗೆ ರಕ್ಷಣೆ ನೀಡು ವಂತಿದೆ. ಹೆಚ್ಚಾಗಿ ಅಪಘಾತಗಳಾದಾಗ ಇತರ ಮೂಳೆಗಳಿಗಿಂತಲೂ ಬೆನ್ನು ಮೂಳೆಯ ಬಗ್ಗೆ ಬಹಳ ಜಾಗೃತರಾಗ ಬೇಕು. ಒಂದು ವೇಳೆ ಬೆನ್ನು ಮೂಳೆಗೆ ಹೆಚ್ಚಿನ ಪೆಟ್ಟು ತಗುಲಿದರೆ ಅಥವಾ ಮುರಿತ ಕ್ಕೊಳಗಾಗಿದ್ದರೆ ರೋಗಿಯನ್ನು ಆದಷ್ಟೂ ಕದಲಿಸದೇ ಸ್ಟ್ರೆಚರ್‍ನಲ್ಲಿ ಮಲಗಿಸಬೇಕು. ತಕ್ಷಣಕ್ಕೆ ಸ್ಟ್ರೆಚರ್ ಸಿಗದಿದ್ದರೆ ಸ್ಥಳದಲ್ಲೇ 2 ಉದ್ದದ ಕೋಲು ಹಾಗೂ 1 ದೊಡ್ಡ ಕಂಬಳಿ ಅಥವಾ (ಕಂಬಳಿ ಸಿಗದಿದ್ದಲ್ಲಿ) ಯಾವುದೇ ಇಬ್ಬರು ವ್ಯಕ್ತಿಗಳ ಶರ್ಟು ಬಿಚ್ಚಿಸಿ ಕೋಲಿಗೆ ಕವರ್ ಮಾಡಿ ಬಟನ್ ಹಾಕಿದಾಗ ತಾತ್ಕಾಲಿಕ ಸ್ಟ್ರೆಚರ್ ಸಿದ್ಧ. ಅದರಲ್ಲಿ ರೋಗಿಯನ್ನು ಅಲ್ಲಾಡ ದಂತೆ ಮಲಗಿಸಿ ವೈದ್ಯರ ಬಳಿ ಸಾಗಿಸಿರಿ. ಪಕ್ಕೆಲುಬು ಮುರಿತಕ್ಕೊಳಗಾದರೂ ಮೇಲಿ ನಂತೆ ಮಾಡಿ. ಇದಲ್ಲದೇ ಹಲವು ರೀತಿಯ ಮೂಳೆ ಮುರಿತ (ಅಸ್ತಿ ಭಂಗ)ಗಳಾಗಬಹುದು.

ಮೂಳೆ ಮುರಿತದ ವಿಧಗಳು:
* ಸಾಮಾನ್ಯ ಮೂಳೆ ಮುರಿತ: ಮೂಳೆಗೆ ಪೆಟ್ಟಾಗಿದ್ದರೂ ಮುರಿದಿದ್ದರೂ ಗಾಯ ಕಾಣುವುದಿಲ್ಲ.
* ಇಂಡ್ಯಾಕ್ಡ್ ಮೂಳೆ ಮುರಿತ: ಮುರಿದ ಎಲುಬುಗಳ ತುದಿಗಳು ಒಂದರೊಳಗೆ ಒಂದು ಸಿಕ್ಕಿಕೊಂಡಿರುವ ಸ್ಥಿತಿ.
* ಚೂರಾದ ಮೂಳೆ: ಎಲುಬು ಗಳು ಅನೇಕ ಭಾಗಗಳಾಗಿ ಮುರಿ ದಿರುವುದು.
* ಸಂಕೀರ್ಣ ಮೂಳೆ ಮುರಿತ: ಮೂಳೆಗಳು ಮುರಿದು ಚರ್ಮದಿಂದ ಹೊರಬಂದು ರಕ್ತಸ್ರಾವ ಉಂಟಾಗುವ ಸ್ಥಿತಿ.
* ತೊಡಕಾದ ಮೂಳೆ ಮುರಿತ: ಎಲುಬಿನ ಮುರಿತದಿಂದ ಮೆದುಳು, ಮೆದುಳಿನ ನರಗಳು, ಶ್ವಾಸಕೋಶ, ರಕ್ತ ನಾಳಗಳು, ಮೂತ್ರ ಜನಕಾಂಗ ಮುಂತಾದ ಅಂಗಗಳಿಗೆ ಹಾನಿ ಸಂಭವಿಸುವುದು.
* ಅಪೂರ್ಣ ಮೂಳೆ ಮುರಿತ: ಎಲುಬುಗಳು ಅಡ್ಡದಲ್ಲಿ ಸೀಳಿ ಮುರಿದಂತೆ ಬಾಗಿರುವುದು. ಇದು ಹೆಚ್ಚಾಗಿ ಮಕ್ಕಳಲ್ಲಿ ಕಂಡುಬರುವುದು.
ಈ ಮೇಲಿನ ಎಲ್ಲಾ ಸಂದರ್ಭ ಗಳಲ್ಲೂ ರೋಗಿಯನ್ನು ಅಲುಗಾಡಿಸದೇ ಬೇಗನೇ ವೈದ್ಯೋಪಚಾರ ಸಿಗುವಂತೆ ಪ್ರಯತ್ನಿಸಿರಿ.

Leave a Reply