ನಾಟಿಂಗ್‌ಹ್ಯಾಮ್‌: ಐಸಿಸಿ ವಿಶ್ವಕಪ್‌ ಉದ್ಘಾಟನಾ ಪಂದ್ಯದಲ್ಲಿ ಇಂಗ್ಲೆಂಡ್ ದಕ್ಷಿಣ ಆಫ್ರಿಕಾ ವಿರುದ್ಧ ಭರ್ಜರಿ ಜಯ ಸಾಧಿಸಿದ್ದು, ಈ ಪಂದ್ಯದಲ್ಲಿ ಬೌಂಡರಿ ಪಕ್ಕದಲ್ಲಿ ಅದ್ಭುತ ಕ್ಯಾಚ್ ವೊಂದರ ವಿಡಿಯೋ ತುಂಬಾ ವೈರಲ್ ಆಗಿದೆ. ಇಂಗ್ಲೆಂಡ್‌ ತಂಡದ ಬೆನ್‌ ಸ್ಟೋಕ್ಸ್‌ ಅದ್ಭುತ ಕ್ಯಾಚ್ ಗೆ ಟ್ವಿಟರಿಗರಿಂದ ತುಂಬಾ ಪ್ರಶಂಸೆ ಸಿಕ್ಕಿದೆ.
ಆದಿಲ್‌ ರಶೀದ್‌ ಬೌಲಿಂಗ್ ನಲ್ಲಿ ಆಫ್ರಿಕಾದ ಆ್ಯಂಡಿಲೆ ಫೆಹ್ಲುಕ್ವಾಯೊ ಅವರು ಸ್ವೀಪ್‌ ಮಾಡಿದಾಗ ಚೆಂಡು ಬೌಂಡರಿ ದಾಟಿ ಸಿಕ್ಸ್ ಹೋಗುವುದು ಎಂದು ಭಾವಿಸಲಾಗಿತ್ತು, ಆದರೆ ಇದ್ದ ಬೆನ್ ಸ್ಟೋಕ್ಸ್‌ ಗಾಳಿಯಲ್ಲಿ ಹಾರಿ ಒಂದೇ ಕೈ ಚಾಚಿ ಹಿಡಿದ ಕ್ಯಾಚ್‌ ಹಿಡಿದರು. ಇಂತಹ ಕ್ಯಾಚ್ ಬಹಳ ಅಪರೂಪ ಮತ್ತು ಹಿಂದೆಂದೂ ನೋಡಿರರು ಸಾಧ್ಯವಿಲ್ಲ ಎಂದು ಐಸಿಸಿ ಟ್ವೀಟ್ ಮಾಡಿದೆ.

Leave a Reply