ಹೊಸದಿಲ್ಲಿ: ತಾನು ಚುನಾವಣಾ ಪ್ರಚಾರಕ್ಕೆ ಬಂದರೆ ಹಿಂದೂ ಮತಗಳನ್ನು ಕಳಕೊಳ್ಳಬೇಕಾದೀತೆಂದು ಕೆಲವು ಕಾಂಗ್ರೆಸ್ ನಾಯಕರಿಗೆ ಹೆದರಿಕೆ ಇದೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಝಾದ್ ಹೇಳಿದರು. ಆದ್ದರಿಂದ ಕಳೆದ ನಾಲ್ಕು ವರ್ಷಗಳಲ್ಲಿ ಪಾರ್ಟಿಯ ಕೆಲವು ಹಿಂದು ಸಹೋದರರು ತನ್ನನ್ನು ಪ್ರಚಾರಕ್ಕೆ ಕರೆಯುವುದಿಲ್ಲ ಎಂದು ಅವರು ಹೇಳಿದರು. ಅಲಿಗಡ ಮುಸ್ಲಿಂ ಯುನಿವರ್ಸಿಟಿಯ ಹಳೆ ವಿದ್ಯಾರ್ಥಿಗಳ ಸಮ್ಮೇಳನದಲ್ಲಿ ಅವರು ಮಾತಾಡುತ್ತಿದ್ದರು.

ಯುವ ಕಾಂಗ್ರೆಸ್ ನಾಯಕನಾಗಿದ್ದಾಗ ದೇಶದುದ್ದಕ್ಕೂ ಶೇ. 95ರಷ್ಟು ಹಿಂದೂ ನಾಯಕರು ಪ್ರಚಾರಕ್ಕೆ ಕರೆಯುತ್ತಿದ್ದರು. ಶೇ. 5ರಷ್ಟು ಮುಸ್ಲಿಮರು ಕರೆದಿದ್ದರು. ಆದರೆ ಕಳೆದ ನಾಲ್ಕು ವರ್ಷಗಳಲ್ಲಿ ಶೆ.95ರಷ್ಟು ಇದ್ದುದು ಶೇ.20ಕ್ಕಿಳಿದಿದೆ. ನಾನು ಬಂದರೆ ಹಿಂದೂ ವೋಟುಗಳನ್ನು ಕಳಕೊಳ್ಳಬೇಕಾದೀತೆಂಬ ಹೆದರಿಕೆಯಿಂದ ಹೀಗೆ ಮಾಡಲಾಗುತ್ತಿದೆ ಎಂದು ಗುಲಾಂ ನಬಿ ಆರೋಪಿಸಿದರು.

ಪ್ರಚಾರಕ್ಕೆ ಕರೆಯದ ನೋವಿನಲ್ಲಿ ಹಿರಿಯ ನಾಯ ದಿಗ್ವಿಜಯ ಸಿಂಗ್ ಕೂಡ ನಿನ್ನೆ ಬೇಸರ ವ್ಯಕ್ತಪಡಿಸಿದ್ದರು. ತಾನು ಭಾಷಣ ಮಾಡಿದರೆ ಕಾಂಗ್ರೆಸ್ ಮತಗಳನ್ನು ಕಳಕೊಳ್ಳಬೇಕಾದೀತು ಎಂದು ಕೆಲವರಿಗೆ ಹೆದರಿಕೆಯಿದೆ ಎಂದು ದಿಗ್ವಿಜಯ ಸಿಂಗ್ ಹೇಳಿದ್ದರು. ಮಧ್ಯಪ್ರದೇಶ,ರಾಜಸ್ಥಾನಗಳ ಸಹಿತ ಐದು ರಾಜ್ಯಗಳಲ್ಲಿ ಚುನಾವಣೆ ಹತ್ತಿರವಾಗಿದ್ದು, ಈ ವೇಳೆ ಇಬ್ಬರುಹಿರಿಯ ನಾಯಕರು ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.

Leave a Reply