ಮುಂಬೈ: ಬೀದಿ ನಾಯಿಗೆ ಆಹಾರ ನೀಡಿದ ಕಾರಣಕ್ಕೆ ಸೊಸೈಟಿಯೊಂದು 3.6 ಲಕ್ಷ ರೂ. ದಂಡ ವಿಧಿಸಿದ ಘಟನೆ ನಡೆದಿದೆ.ಮುಂಬಯಿಯ ಕಾಂದೀವಲೀಯಲ್ಲಿನ ಸೊಸೈಟಿಯೊಂದು ಬೀದಿನಾಯಿಗಳಿಗೆ ಆಹಾರ ನೀಡಿದ ವಿಷಯದಲ್ಲಿ ಇಬ್ಬರು ಸದಸ್ಯರ ಮೇಲೆ 3.6 ಲಕ್ಷದ ದಂಡ ಹಾಕಿದೆ.
ಅವರಲ್ಲೊಬ್ಬರಾದ ನೇಹಾ ದತ್ವಾನಿ ಅವರ ಮೇಲೆ ದಿನಕ್ಕೆ Rs. 2,500 ರಂತೆ ದಂಡ ವಿಧಿಸಲಾಯಿತು.”ಸೊಸೈಟಿಯೊಳಗೆ ನಾಯಿಗಳು ಹಿರಿಯರು ಮಕ್ಕಳ ಮೇಲೆ ಬೊಗಳುತ್ತವೆ…ಸೊಸೈಟಿಯಿಂದ ಹೊರಗೆ ನಾಯಿಗಳಿಗೆ ಆಹಾರ ನೀಡುವುದರಲ್ಲಿ ನಮಗೇನೂ ಸಮಸ್ಯೆಯಿಲ್ಲ” ಎಂದು ಸೊಸೈಟಿಯ ಚೇರ್ಮನ್ ತಿಳಿಸಿದ್ದಾರೆ.
