ಆಸ್ಟ್ರೇಲಿಯ: ಹೆಚ್ಚಿನ ಲಾಟರಿಪ್ರಿಯರಿಗೆ ಒಮ್ಮೆಯಾದರೂ ಲಾಟರಿ ಹೊಡೆಯಬೇಕೆನ್ನುವಾಶೆ ಇರುತ್ತದೆ. ಆದರೆಒಬ್ಬನೇಒಬ್ಬ ವ್ಯಕ್ತಿಗೆ 14 ಬಾರಿ ಲಾಟರಿ ಹೊಡೆದರೆ ಏನಾಗಬಹುದು. ಈಗ ಇಂತಹ ಅದೃಷ್ಟವಂತನ ದೆಸೆಯಲ್ಲಿ ಅಧಿಕಾರಿಗಳು ನಿಯಮವನ್ನೇ ಬದಲಾಯಿಸಿಬಿಟ್ಟಿದ್ದಾರೆ.

ಗಣಿತಜ್ಞ ಸ್ಟೀಫನ್ ಮಂಡೆಲ್ ಒಂದರ ನಂತರ ಒಂದರಂತೆ ಲಾಟರಿ ಗೆಲ್ಲುತ್ತಾ ಹೋದರು. ಕಾನೂನು ಉಲ್ಲಂಘನೆಯನ್ನು ಒಮ್ಮೆಯೂ ಮಾಡಿಲ್ಲ. ಮೈಲ್ ಆನ್‍ಲೈನ್ ಪೋರ್ಟಲ್ ವರದಿ ಪರಕಾರ ರೊಮೆನಿಯ ಮೂಲದ ಆಸ್ಟ್ರೇಲಿಯನ್ ಪ್ರಜೆ ಸ್ಟೀಫನ್ ತನ್ನ ಗಣಿತಜ್ಞಾನದಲ್ಲಿ ವ್ಯವಸ್ಥೆಯನ್ನು ಕ್ರಾಕ್ ಮಾಡಿ ಲಾಟರಿ ಗೆಲ್ಲುವ ಫಾರ್ಮೂಲವನ್ನು ತಯಾರಿಸಿದ್ದು, ಹದಿನಾರು ಬಾರಿ ಲಾಟರಿಯಲ್ಲಿ ಗೆದ್ದಿದ್ದಾರೆ. ನಂತರ ಲಾಟರಿಗೆ ಸಂಬಂಧಿಸಿದನಿಯಮವನ್ನೇ ಅಧಿಕಾರಿಗಳು ಬದಲಾಯಿಸಿ ಬಿಟ್ಟಿದ್ದಾರೆ.

ರೋಮೆನಿಯದಲ್ಲಿ ಅರ್ಥಶಾಸ್ತ್ರಜ್ಞನಾಗಿ ಕೆಲಸ ಮಾಡುವ ಮಂಡೆಲ್ ಐದು ಡಿಜಿಟಲ್‍ನ ಫಾಮ್ರ್ಯೂಲದಲ್ಲಿ ಆರು ನಂಬರಿನ ಅಂದಾಜು ಮಾಡಲು ಪ್ರಯತ್ನಿಸಿದರು. ದೊಡ್ಡ ಮೊತ್ತದ ಬಹುಮಾನ ಗೆದ್ದ ಬಳಿಕ ತನ್ನ ಕುಟುಂಬದೊಂದಿಗೆ ರೊಮೆನಿಯದಿಂದ ಆಸ್ಟ್ರೇಲಿಯಕ್ಕೆ ವಲಸೆ ಬಂದು ಇರತೊಡಗಿದರು. ಇಲ್ಲಿಂದ ತನ್ನ ಫಾರ್ಮೂಲವನ್ನು ಪ್ರಯೋಗಿಸ ತೊಡಗಿದರು. ನಂತರ ಆಸ್ಟ್ರೇಲಿಯದ ಅಧಿಕಾರಿಗಳು ಇವರತ್ತ ಕಣ್ಣಿಟ್ಟರು. ಮಂಡೆಲ್ ಯಾವ ರೀತಿಯಲ್ಲಿಯೂ ಕಾನೂನು ಉಲ್ಲಂಘಿಸಿರಲಿಲ್ಲ.ಆದರೆ ಲಾಟರಿಯಂತೂ ಅವರಿಗೆ ಹೊಡೆಯುತ್ತಿತ್ತು. ತದ ನಂತರ ಮಂಡೆಲ್‍ನನ್ನು ತಡೆಯಲು ಕಾನೂನು ರೂಪಿಸಲಾಯಿತು.ನಂತರ ಒಬ್ಬ ವ್ಯಕ್ತಿ ಲಾಟರಿಯ ಎಲ್ಲ ಟಿಕೆಟು ಖರೀದಿಸುವುದು ಕಾನೂನಿನ ಮೂಲಕ ನಿಷೇಧಿಸಲಾಯಿತು. ತದ ನಂತರ ಮಂಡೆಲ್ ಐವರು ಬಿಸಿನೆಸ್ ಪಾರ್ಟನರ್ಸ್ ಜೊತೆ ಸೇರಿಕೊಂಡರು. ನಂತರ ಗ್ರೂಫ್‍ನಲ್ಲಿ ಲಾಟರಿ ಖರೀದಿಸದಂತೆ ಕಾನೂನು ತರಲಾಯಿತು. ಆಗ ಅವರು ತನ್ನದೆ ಲಾಟರಿ ಅಂಗಡಿ ತೆರೆದರು.

ಹೀಗೆಲ್ಲ ಸ್ಟೀಫನ್ ಮಂಡೆಲ್‍ನನ್ನು ತಡೆಯಲು ಯತ್ನಿಸಿದಾಗ ಅವರಿಗೆ ಹೆಚ್ಚು ಕಷ್ಟವಾದಂತೆ ಅಮೆರಿಕದ ಲಾಟರಿ ವ್ಯವಸ್ಥೆಯತ್ತ ಕಣ್ಣು ಹೊರಳಿಸಿದರು.ಇದರಲ್ಲಿಅವರು ಮೂರು ಕೋಟಿ ಡಾಲರ್‍ಗಿಂತ ಹೆಚ್ಚು ಬಹುಮಾನ ಗೆದ್ದಿದ್ದಾರೆ. ಅವರು ಒಂದು ಲಾಟರಿಯನ್ನು ರೊಮೆನಿಯದಲ್ಲಿ ಗೆದ್ದರೆ ಆಸ್ಟ್ರೇಲಿಯದಲ್ಲಿ 12ಲಾಟರಿ ಗೆದ್ದಿದ್ದಾರೆ.ಅಮೆರಿಕದ ವರ್ಜಿನಿಯದಲ್ಲಿಬಹುದೊಡ್ಡ ಜ್ಯಾಕ್‍ಪಾಟ್ ಗೆದ್ದಿದ್ದಾನೆ. ಬ್ರಿಟೆನ್ ಮತ್ತು ಇಸ್ರಾಯೀಲ್‍ನಲ್ಲಿ ಲಾಟರಿ ಖರೀದಿಸಿದ್ದಾರೆ.ಫ್ರಾಡ್ ಎಂಬಲ್ಲಿ ಒಂದು ಕೇಸಿನಲ್ಲಿ ಸ್ಟೀಫನ್ ಮಂಡೆಲ್‍ಗೆ 20 ತಿಂಗಳ ಜೈಲು ಶಿಕ್ಷೆಆಗಿತ್ತು.

Leave a Reply