ರಿಯಾದ್: ಸೌದಿ ಅರೇಬಿಯದಲ್ಲಿ ಸಿನೆಮಾ ಥಿಯೇಟರಿಗಾಗಿರುವ ನಾಲ್ಕನೆ ಪರವಾನಿಗೆ ಮಂಜೂರಾಗಿದೆ. ಲೆಕ್ಸ್ ಎಂಟರ್‍ಟೈನ್‍ಮೆಂಟ್ ಕಂಪೆನಿಗೆ ಹೊಸದಾಗಿ ಲೈಸನ್ಸ್ ಲಭಿಸಿದ್ದು 15 ನಗರಗಳಲ್ಲಿ ಇವರು ಸಿನೆಮಾ ಗೃಹ ಆರಂಭಿಸಲಿದ್ದಾರೆ.
ಸೌದಿಯ ಸಿನೆಮಾ ಥಿಯೇಟರ್‍ಗಳಿಗಾಗಿ ನೀಡಲಾಗುತ್ತಿರುವ ನಾಲ್ಕನೆ ಲೈಸೆನ್ಸ್ ಇದು. ಅಂತಾರಾಷ್ಟ್ರೀಯ ಸಿನೆಮಾ ಕಂಪೆನಿಯಾದ ಲೆಕ್ಸ್ ಎಂಟರ್‍ನೈನ್ ಮೆಂಟ್ ಹೊಸ ಥಿಯೇಟರ್‍ಗಳನು ಸಿದ್ಧಪಡಿಸಲಿದೆ. ಈಗಾಗಲೇ ವಿವಿಧ ಕಂಪೆನಿಗಳ ಐದು ಸಾವಿರ ಥಿಯೇಟರ್‍ಗಳು ಸೌದಿ ಅರೇಬಿಯದಲ್ಲಿ ತೆರೆಯುವ ಕುರಿತು ಪ್ರಕಟನೆ ಹೊರಬಂದಿದೆ. ಇದಲ್ಲದೆ ಈಗ ಲೆಕ್ಸ್ ಕಂಪೆನಿಗಳಿಗೂ ಥಿಯೇಟರ್ ತೆರೆಯುವ ಅವಕಾಶ ಕಲ್ಪಿಸಲಾಗಿದೆ.
ಮಾಹಿತಿ ಸಚಿವ ಡಾ. ಅವಾದ್ ಅಲ್‍ಅವಾದ್ ಲೆಕ್ಸಿ ಕಂಪೆನಿಗೆ ಪರವಾನಿಗೆ ಹಸ್ತಾಂತರಿಸಿದರು. ಲೆಕ್ಸ್ ಎಂಟರ್‍ಟೈನ್ ಮೆಂಟ್ ಕಂಪೆನಿ, ಅಲ್‍ಹುಕೈರ್ ಟೂರಿಸಂ ಆಂಡ್ ಡೆವಲಪ್‍ಮೆಂಟ್ ಗ್ರೂಪ್ ಸೆಂಟ್‍ಪೊಲಿಸ್ ಇಂಟರ್‍ನೇಶನಲ್, ಅಲ್ ತಾಈರ್ ಗ್ರೂಪ್ ಸೇರಿ ಸಿನೆಮಾ ಥಿಯೇಟರ್ ನಿರ್ಮಿಸಲಿದೆ.