-ಎಲ್ಲಾ ಕೋಣೆಗಳಿಗೂ ಅಗತ್ಯಕ್ಕೆ ತಕ್ಕಂತೆ ಬಾಗಿಲುಗಳು ಮತ್ತು ಕಿಟಕಿಗಳಿರಬೇಕು. ಅವುಗಳನ್ನು ತೆರೆದಿಡಬೇಕು.

-ಸೊಳ್ಳೆ ಬಾರದಂತೆ ಸೊಳ್ಳೆ ಪರದೆಗಳನ್ನು ಅಳವಡಿಸಬೇಕು.

-ಸ್ನಾನದ ಕೋಣೆ, ಅಡುಗೆ ಕೋಣೆ ಮುಂತಾದೆಡೆಗಳಲ್ಲಿ ವಾಯು ಸಂಚಾರಕ್ಕೆ ಎಕ್ಸಾಸ್ಟ್ ಫ್ಯಾನ್‌ಗಳನ್ನು ಅಳವಡಿಸಬೇಕು. 

-ಹಿರಿಯರು ಓಡಾಡುವ ಸ್ಥಳಗಳಲ್ಲಿ ಎಡವಿ ಬೀಳದಿರಲು ಚೆನ್ನಾಗಿ ಬೆಳಕು ಇರಬೇಕು, ಸಾಧ್ಯವಾದಷ್ಟು ಸಿ.ಎಫ್.ಎಲ್,ಬಲ್ಬ್ ಗಳನ್ನು ಉಪಯೋಗಿಸಬೇಕು. ವಿದ್ಯುತ್‌ ಉಳಿಯುತ್ತದೆ. ದೀರ್ಘ ಬಾಳಿಕೆ ಬರುತ್ತದೆ.

– ರಾತ್ರಿ ಮಲಗುವ ವೇಳೆ ಕೋಣೆಯಲ್ಲಿ ಯಾವುದೇ ರೀತಿಯ ಬೆಳಕು ಇಲ್ಲದಿರುವುದು ಸುಖ ನಿದ್ರೆಗೆ ಸಹಾಯಕ. ಏರ್ ಕಂಡೀಷನ್‌ಗಳನ್ನು ಶುಚಿಯಾಗಿಟ್ಟುಕೊಳ್ಳಬೇಕು. ಕ್ರಮಬದ್ಧವಾಗಿ ಸರ್ವಿಸ್ ಮಾಡುತ್ತಿರಬೇಕು.

Leave a Reply