Representational Image: Recipes 'R' Simple

ಬೇಕಾಗುವ ಸಾಮಗ್ರಿಗಳು:
1. ಚಿಕನ್- 1/2 ಕೆ.ಜಿ. (ಮೀಡಿಯಂ ಸೈಝ್‍ನ ತುಂಡು), ಶುಂಠಿ, ಬೆಳ್ಳುಳ್ಳಿ ಪೇಸ್ಟ್- 2 ಸ್ಪೂ,ಕರಿಮೆಣಸಿನ ಹುಡಿ- 1/2 ಟಿ.ಸ್ಪೂ., ಶಿರ್ಕ- 1/2 ಕಪ್,ನೀರು- ಒಂದು ಕಪ್, ಉಪ್ಪು- ರುಚಿಗೆ, 2. ಮೈದಾ- 1/2 ಕಪ್,ಕನ್ಫ್ಲವರ್ – 1 ಕಪ್,ಬ್ರೆಡ್ ಹುಡಿಮಾಡಿದ್ದು- 1/2 ಕಪ್, ಕರಿಮೆಣಸು ಹುಡಿ- 1/2 ಸ್ಪೂ., ಮೆಣಸು ಹುಡಿ- 1/2 ಸ್ಪೂ.,
ಉಪ್ಪು- 1/2 ಸ್ಪೂ.,3. ಸನ್‍ಫ್ಲವರ್ ಎಣ್ಣೆ- ಅಗತ್ಯಕ್ಕೆ,4. ಮೊಟ್ಟೆ- 2, ಹಾಲು- 1 ಕಪ್.

ಮಾಡುವ ವಿಧಾನ: ಚಿಕನ್ ಒಂದನೆಯ ಸಾಮಗ್ರಿಗಳನ್ನು ಸೇರಿಸಿ, ಚೆನ್ನಾಗಿ ಕಲಸಿ ನಾಲ್ಕು ತಾಸು ಇಡಿ. ಅದರ ಬಳಿಕ ಅದನ್ನು ಸೋಸುವ ಪಾತ್ರೆಯಲ್ಲಿ ನೀರು ಹೋಗಲು ಇಡಿ. (ಹಾಗೆ ಮಾಡಿದರೆ ಚಿಕನ್ ಸಾಫ್ಟ್ ಆಗುತ್ತದೆ). ಮೊಟ್ಟೆ ಮತ್ತು ಹಾಲನ್ನು ಚೆನ್ನಾಗಿ ಮಿಕ್ಸ್ ಮಾಡಿಡಿ.ಇನ್ನು ಚಿಕನ್ ತುಂಡುಗಳನ್ನು ಒಂದೊಂದಾಗಿ  ತೆಗೆದು ಮೊಟ್ಟೆ ಹಾಲು ಮಿಶ್ರಣಕ್ಕೆ ಮುಳುಗಿ ಹುಡಿಯಿರುವ ಪಾತ್ರೆಗೆ ಹಾಕಿ ಹುಡಿಯಲ್ಲಿ ಹೊರಳಿಸಿ ತೆಗೆಯಿರಿ. ಪುನಃ ಹಾಲಿನಲ್ಲಿ ಮುಳುಗಿಸಿ ಹುಡಿಯಲ್ಲಿ ಹೊರಳಾಡಿಸಿ. ಹೀಗೆ ಎರಡು ಬಾರಿ ಮಾಡಿದರೆ ಕೋಟಿಂಗ್ ಚೆನ್ನಾಗಿ ಹಿಡಿಯುತ್ತದೆ. ಇನ್ನು ಕಾದ ಎಣ್ಣೆಗೆ ಹಾಕಿ. ಮೊದಲು ಎರಡು ನಿಮಿಷ ಜೋರು ಉರಿಯಲ್ಲಿ ಕಾಯಿಸಿ ತಿರುಗಿಸಿ ಹಾಕಿ, ಬಿಸಿಯನ್ನು ಕಡಿಮೆ ಮಾಡಿ, 10 ರಿಂದ 15 ನಿ.ವರೆಗೆ ಅಡಿಮೇಲು ಮಾಡುತ್ತಲಿರಿ. (ಹಾಗಿದ್ದರೆ ಮಾತ್ರ ಚಿಕನ್ಬೇಯುವುದು) ಬಟಾಟೆಯನ್ನು ಉದ್ದಕ್ಕೆ ಕತ್ತರಿಸಿ ಇದೇ ಎಣ್ಣೆಯಲ್ಲಿ ಉಪ್ಪು ಸೇರಿಸಿ ಹುರಿಯಿರಿ. ಬಳಿಕ ಅದನ್ನುಬ್ರೋಸ್ಟನ್‍ನ ಸುತ್ತಲೂ ಹರಡಿ ಬಡಿಸಿರಿ. ಮಯೋನಿಸ್ಸೇರಿಸಿ ಬಿಸಿಯಿರುವಾಗಲೇ ಸೇವಿಸಿ.

Leave a Reply