ಬೆಂಗಳೂರು : ಅಕ್ರಮ ಸಂಬಂಧಗಳು ಹೆಚ್ಚಾಗಿ ಕೊಲೆಯಲ್ಲೇ ಸಮಾಪ್ತಿಯಾಗುತ್ತದೆ ಎಂಬುದಕ್ಕೆ ಮತ್ತೊಂದು ಉದಾಹರಣೆ ರಾಜಧಾನಿಯ ನಡೆದ ಘಟನೆ. ಪತಿಯೊಬ್ಬ ತನ್ನ ಪತ್ನಿಯನ್ನೇ ಕೊಂದ ಘಟನೆ ನಗರದಲ್ಲಿ ನಡೆದಿದೆ. ಇಲ್ಲಿನ ಬರ್ಗೂರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ದಾರುಣ ಘಟನೆ ನಡೆದಿರುವುದಾಗಿ ವರದಿ ಆಗಿದೆ. ಜತೆಗೆ ಪತ್ನಿ ಅಕ್ರಮ ಸಂಬಂಧ ಹೊಂದಿದ್ದ ಕಾರಣ ಹತ್ಯೆ ಮಾಡಿದ ಪತಿ ಖುದ್ದು ಪೊಲೀಸರಿಗೆ ಶರಣಾಗಿದ್ದಾನೆ ಎಂದು ಮೂಲಗಳು ತಿಳಿಸಿವೆ.
ತನ್ನ ಸ್ವಂತ ತಮ್ಮನ ಜತೆಗೆ ಪತ್ನಿ ಅಕ್ರಮ ಸಂಬಂಧ ಹೊಂದಿರುವುದಾಗಿ ತಿಳಿದ ಕೂಡಲೇ ಪತಿ ಕೋಪಗೊಂಡಿದ್ದ. ಇಂತಹ ಅಕ್ರಮ ಸಂಬಂಧ ಸರಿಯಲ್ಲ ಎಂದರೂ ಪತ್ನಿಯಾದವಳು ಕೇಳಲಿಲ್ಲ. ನಿನ್ನಿಂದ ನನಗೆ ಲೈಂಗಿಕ ಸುಖ ಸಿಗುವುದಿಲ್ಲ, ಆದ್ದರಿಂದ ನಿನ್ನ ತಮ್ಮನಿಂದ ಅದನ್ನು ಪಡೆಯುತ್ತೇನೆ ಎಂದು ಆಕೆ ಪ್ರತಿವಾದ ಮಂಡಿಸಿದ್ದಾಳೆ.

ಆಕ್ರೋಶಗೊಂಡ ಪತಿ ಆಕೆಯನ್ನು ನಿರ್ದಯವಾಗಿ ಹತ್ಯೆಗೈದಿದ್ದಾನೆ ಎಂದು ಹೇಳಲಾಗಿದೆ.
ದಂಪತಿಗಳಿಗೆ ಇಬ್ಬರು ಮಕ್ಕಳಿದ್ದು, ಎಷ್ಟು ಹೇಳಿದರೂ ಅಕ್ರಮ ಸಂಬಂಧ ಮುಂದುವರಿಸಿದ್ದಾರೆ.ಅದಕ್ಕಾಗಿ ಕೊಂದೆ ಎಂದು ಆರೋಪಿ ಪೊಲೀಸರಿಗೆ ಶರಣಾಗಿ ತಿಳಿಸಿದ್ದಾನೆ. ಕಾಮದಾಹ ಮತ್ತು ಮಿತಿಮೀರಿದ ಅಕ್ರಮ ಸಂಬಂಧದಿಂದಾಗಿ ಅದೆಷ್ಟೋ ಕುಟುಂಬಗಳ ಶಾಂತಿ ಹಾಳಾಗುತ್ತಿದ್ದು, ಮಕ್ಕಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ.

Leave a Reply