ಚೆನ್ನೈ : ಹೆಂಡತಿಯಾದವಳು ಟಿಕ್ ಟಾಕ್ ವಿಡಿಯೋ ಮಾಡಿದ್ದಕ್ಕೆ ಪತಿಯಿಂದಲೇ ಹತ್ಯೆಯಾದ ಘಟನೆ ತಮಿಳ್ನಾಡಿನ ಕೊಯಮತ್ತೂರಿನಲ್ಲಿ ವರದಿಯಾಗಿದೆ. 28 ವರ್ಷದ ನಂದಿನಿ ಮೃತ ಪಟ್ಟ ದುರ್ದೈವಿ , ಈಕೆ ಪ್ರೈವೇಟ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದು, ಕಟ್ಟಡ ನಿರ್ಮಾಣ ಕಾರ್ಮಿಕ ಕನಕ ರಾಜು ಎಂಬುವರನ್ನು ಮದುವೆಯಾಗಿದ್ದಳು. ವೈವಾಹಿಕ ಮನಸ್ತಾಪದಿಂದಾಗಿ ದಂಪತಿಗಳು ಎರಡು ವರ್ಷದಿಂದ ದೂರ ದೂರ ವಾಗಿ ವಾಸಿಸುತ್ತಿದ್ದರು. ಈ ಮಧ್ಯೆ ನಂದಿನಿ ಟಿಕ್ ಟಾಕ್ ವಿಡಿಯೋಗಳಿಗೆ ಅಡಿಕ್ಟ್ ಆಗಿದ್ದು, ಆಗಾಗ ವಿಡಿಯೋ ಪೋಸ್ಟ್ ಮಾಡಿ ಕನಕ ರಾಜು ನನ್ನು ರೇಗುವಂತೆ ಮಾಡುತ್ತಿದ್ದಳು. ಕೋಪಗೊಂಡ ಪತಿ ಇಂತಹ ವಿಡಿಯೋ ಅಪ್ಲೋಡ್ ಮಾಡಬೇಡ ಎಂದು ವಾರ್ನಿಂಗ್ ಕೊಟ್ಟಿದ್ದ. ಮಾತ್ರವಲ್ಲ, ಮನೆಗೆ ಮರಳಿ ಒಟ್ಟಾಗಿ ಕುಟುಂಬದ ಜೊತೆ ವಾಸಿಸುವಂತೆ ಕೇಳಿಕೊಂಡಿದ್ದ.

ಆದರೆ ಇದಕ್ಕೆ ನಂದಿನಿ ಕಿವಿಗೊಡಲಿಲ್ಲ.. ನಂದಿನಿಗೆ ಕಾಲ್ ಮಾಡಿದರೆ ಆಕೆಯ ಫೋನ್ ನಿರಂತರ ಬ್ಯುಸಿ ಬರುತ್ತಿತ್ತು, ಇದರಿಂದ ಕೋಪಗೊಂಡ ಪತಿ ಕನಕ ರಾಜು ಆಕೆಯ ಕಾಲೇಜಿಗೆ ಹೋಗಿ ಗಲಾಟೆ ಮಾಡಿದ್ದಾನೆ. ಇಬ್ಬರ ನಡುವೆ ಜಗಳ ತಾರಕಕ್ಕೇರಿದ್ದು, ಕನಕ ರಾಜು ಚಾಕುವಿನಿಂದ ಪತ್ನಿಗೆ ಇರಿದಿದ್ದಾನೆ. ಆಕೆ ರಕ್ತ ಸ್ರಾವದಿಂದಾಗಿ ಸ್ಥಳದಲ್ಲೇ ಕೊನೆಯುಸಿರೆಳೆದಳು. ಕನಕ ರಾಜು ವಿರುದ್ಧ ಕೊಲೆ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ.

Leave a Reply