ಉತ್ತರಾಖಂಡ್‌ನ ರಾಣಿಖೇತ್ ಮೂಲದ ಗಂಗೋಲಿ ಪರಿವಾರ ವಿಶಿಷ್ಟ ಕಾರಣಕ್ಕಾಗಿ ಕಳೆದ 14 ವರ್ಷಗಳಿಂದ ರಂಝಾನ್ ತಿಂಗಳ ಕೊನೆಯ ಜುಮಾ ದಿನದ ಉಪವಾಸ ವೃತ ಹಿಡಿಯುತ್ತಿದ್ದಾರೆ. ಬೆಂಗಳೂರಿನ ಅಜೀಂ ಪ್ರೇಮ್ ಜಿ ವಿಶ್ವವಿದ್ಯಾಲಯದಲ್ಲಿ ಅಸೋಸಿಯೇಟ್ ಡ್ರೈರೆಕ್ಟರ್ ಆಗಿರುವ ಅನಂತ್ ಗಂಗೋಲಿ ಮತ್ತವರ ಪರಿವಾರದ ಸದಸ್ಯರು ಸಮಾಜದಲ್ಲಿ ಹದಗೆಡುತ್ತಿರುವ ಸೌಹಾರ್ದವನ್ನು ಸರಿ ಮಾಡಲು ಈ ರೀತಿ ಮಾಡುತ್ತಿರುವುದಾಗಿ ತಿಳಿಸಿದ್ದಾರೆ. ಕಳೆದ ಐದು ವರ್ಷಗಳಿಂದ ಅನಂತ್ ಗಂಗೋಲಿಯವರ ಇಬ್ಬರು ಮಕ್ಕಳಾದ ಅಂಬರ್ ಹಾಗೂ ಅವನಿ ಕೂಡ ಉಪವಾಸ ವೃತ ಮಾಡುತ್ತಿದ್ದಾರೆ. ರಂಝಾನಿ ತಿಂಗಳಲ್ಲೇ ಅನಂತ್ ಅವರ ಜೀವದ ಗೆಳೆಯ ಜಾವೆದ್ ಸುಲ್ತಾನ್ ನಿಧನರಾಗಿದ್ದರಂತೆ, ಪ್ರತೀ ವರ್ಷ ಈ ಒಂದು ಉಪವಾಸವನ್ನು ಆತನಿಗೆ ಸಮರ್ಪಿಸುತ್ತಿದ್ದೇನೆ ಎಂದು ಅನಂತ್ ಹೇಳಿದ್ದಾರೆ.

ರಂಝಾನ್ ಒಂದು ಪವಿತ್ರ ತಿಂಗಳಾಗಿದ್ದು, ಉಪವಾಸದಿಂದಾಗಿ ನಮ್ಮ ದೇಹದ ಆರೋಗ್ಯಕ್ಕೆ ಹಲವಾರು ಪ್ರಯೋಜನಗಳಿವೆ. ಇದು ವೈಜ್ಞಾನಿಕವಾಗಿಯೂ ಸಾಬೀತಾಗಿದೆ. ನಾವು ಸಹರಿಯಿಂದ ಇಫ್ತಾರ್ ವರೆಗೆ ನಿಯಮಾನುಸಾರವಾಗಿ ಉಪವಾಸ ವೃತ ಆಚರಿಸುತ್ತೇವೆ ಎಂದು ಅನಂತ್ ಪರಿವಾರ ತಿಳಿಸಿದೆ. ಅಂದ ಹಾಗೆ ಅನಂತ್ ಗಂಗೋಲಿಯವರು ಪತ್ರಕರ್ತ ಅನುರಾಗ್ ಗಂಗೋಲಿಯವರ ಅಣ್ಣ ಆಗಿದ್ದಾರೆ.

Leave a Reply