ಮಕ್ಕಾ [ಸೌದಿ ಅರೇಬಿಯಾ]: ಇಸ್ಲಾಂಗೆ ಭಯೋತ್ಪಾದನೆಯೊಂದಿಗೆ ಯಾವುದೇ ಸಂಬಂಧವಿಲ್ಲ ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಶನಿವಾರ ಪ್ರತಿಪಾದಿಸಿದರು.
ತಮಿಳ್ ಟೈಗರ್ಸ್ ಮಾಡುವ ಭಯೋತ್ಪಾದನಾ ಕೃತ್ಯಗಳಿಗೆ ಯಾರೂ ಹಿಂದೂ ಧರ್ಮವನ್ನು ಬೊಟ್ಟು ಮಾಡುವುದಿಲ್ಲ, ಮತ್ತೆ ಯಾರೋ ಮಾಡಿದ ಕೃತ್ಯಕ್ಕೆ ಇಸ್ಲಾಮನ್ನು ಭಯೋತ್ಪಾದನೆಯ ಬ್ರಾಂಡ್ ಆಗಿ ಯಾಕೆ ಆರೋಪಿಸಬೇಕು ಎಂದು ಮಕ್ಕಾದಲ್ಲಿ ನಡೆದ ಇಸ್ಲಾಮಿಕ್ ಸಹಕಾರ ಸಂಸ್ಥೆ (ಒಐಸಿ) ಶೃಂಗಸಭೆಯಲ್ಲಿ ಖಾನ್ ಹೇಳಿದರು.
ಇಸ್ಲಾಮಿಗೂ ಭಯೋತ್ಪಾದನೆಗೂ ಯಾವುದೇ ಸಂಬಂಧ ಇಲ್ಲ ಎಂಬುದನ್ನು ಮುಸ್ಲಿಂ ರಾಷ್ಟ್ರಗಳು ಶಕ್ತವಾಗಿ ಜಗತ್ತಿಗೆ ಮನವರಿಕೆ ಮಾಡಿಸುವಲ್ಲಿ ಸೋತಿದೆ ಎಂದು ಹೇಳಿದರು.

Leave a Reply