ಕಳೆದ 22 ವರ್ಷಗಳಿಂದ ಈ ಅವಳಿ ಸಹೋದರರು ಅಭಿನವ್ ಪಾಠಕ್ ಮತ್ತು ಪರಿಣವ್ ಪಾಠಕ್ ಒಬ್ಬರನ್ನೊಬ್ಬರು ಬಿಟ್ಟು ಬದುಕಿಲ್ಲ. ಇದೀಗ ಇಬ್ಬರೂ ಒಟ್ಟಿಗೆ ಭಾರತೀಯ ಸೇನೆಗೆ ಸೇರುವ ಮೂಲಕ ಹೊಸ ಮೈಲಿಗಲ್ಲು ದಾಟಿದ್ದಾರೆ. ಇವರಿಬ್ಬರಿಗೆ ಕೇವಲ ಎರಡು ನಿಮಿಷದ ಅಂತರ ಅಷ್ಟೇ.

ಇಬ್ಬರೂ ಅಮೃತ್ಸರದ ಶಾಲೆಯಲಿ ಒಟ್ಟಿಗೆ ಕಲಿತರು. ಇಂಜಿನಿಯರಿಂಗ್ ಕಲಿಯುವ ಹೊತ್ತಲ್ಲೇ ಸೇನೆಗೆ ಸೇರುವ ಮನಸ್ಸನ್ನು ಮಾಡಿದ್ದರು. ಪ್ರತಿಷ್ಠಿತ ಸಂಸ್ಥೆಯಿಂದ ಪದವೀಧರರಾದ ಅವರು, ಪ್ರತ್ಯೇಕ ಸೈನ್ಯ ಘಟಕಗಳಲ್ಲಿ ಅವರಿಗೆ ಪೋಸ್ಟ್ ಈಗ ಸಹೋದರರು ಪರಸ್ಪರ ದೂರವಿರುವ ಸನ್ನಿವೇಶ ಬಂದಿದೆ.  ಉತ್ತಾರಖಂಡದ ಡೆಹ್ರಾಡೂನ್‍ನಲ್ಲಿರುವ ಭಾರತೀಯ ಮಿಲಿಟರಿ ಅಕಾಡೆಮಿ(ಐಎಂಎ)ಯಲ್ಲಿ ಇವರಿಬ್ಬರ ಹಲವು ಸ್ವಾರಸ್ಯಕರ ನೆನಪುಗಳವೆ. ಅನೇಕ ಬಾರಿ ಡ್ರಿಲ್ ತರಬೇತುದಾರರು ಪರಿಣವ್ ಬದಲು ತಪ್ಪಿ ನನ್ನನ್ನು ಕರೆಯುತ್ತಿದ್ದರು. ಕೆಲವೊಮ್ಮೆ ನಾನು ಊಟ ಮಾಡಿ ಬಂದರೂ, ಹೋ ಅಣ್ಣಾ ಊಟ ಮಾಡಲು ಬಾ (Are saab khana to kha lijiye?’) ಎಂದು ಮೆಸ್ ನಲ್ಲಿ ಕರೆಯುತ್ತಿದ್ದರು. ಕೆಲವೊಮ್ಮೆ ನಮ್ಮ ಮೆಸ್ ನಲ್ಲಿ ಜನಸಂದಣಿ ಇರುತ್ತಿದ್ದರೆ ನಾವು ಪರಸ್ಪರ ಕಡಿಮೆ ರಶ್ ಇರುವ ಸಹೋದರನ ಮೆಸ್ ಗೆ ಊಟಕ್ಕೆ ಹೋಗುತ್ತಿದ್ದೆವು. ಯಾರೂ ನಮ್ಮನ್ನು ಗುರುತು ಹಿಡಿಯುತ್ತಿರಲಿಲ್ಲ ಎಂದು ಅಭಿನವ್ ಮತ್ತು ಅವನ ಸಹೋದರ ನೆನಪುಗಳನ್ನು ಹಂಚಿದ್ದಾರೆ.

ನಾವು ಏನನ್ನು ಸಾಧಿಸಲು ಬಯಸಿದ್ದೆವೋ ಅದನ್ನು ನಾವಿಬ್ಬರು ಒಟ್ಟಿಗೆ ಸಾಧಿಸಿದ್ದೇವೆ. ನಮಗೆ ಈ ಬಗ್ಗೆ ಹೆಮ್ಮೆಯಿದೆ. ಶಾಲಾ ದಿನಗಳಿಂದ ನಾವು ಒಂದೇ ಬೆಂಚಿನಲ್ಲಿ ಕೂತಿದ್ದೆವು. ಇದೀಗ ದೇಶ ಸೇವೆಗಾಗಿ ನಾವು ಬೇರೆ ಬೇರೆಯಾಗುತ್ತಿದ್ದೇವೆ ಎಂದು ಅವರು ಹೇಳುತ್ತಾರೆ. ಅವಳಿ ಸಹೋದರರು ಐಎಂಎ ಡೆಹ್ರಾಡೂನ್‍ನಲ್ಲಿ ಪದವಿ ಪಡೆದು ಸೇನೆಗೆ ಸೇರಿಕೊಳ್ಳುತ್ತಿರುವುದು ಮಿಲಿಟರಿ ಅಕಾಡೆಮಿಯ ಇತಿಹಾಸದಲ್ಲಿ ಇದೆ ಮೊದಲ ಬಾರಿಗೆ ಎಂದು ಅಕಾಡೆಮಿ ಟ್ವೀಟ್ ಮಾಡಿದೆ.

 

Leave a Reply