ಅಂಗವೈಕಲ್ಯತೆ ಸಾಧನೆಗೆ ತೊಡಕಾಗುವುದಿಲ್ಲ ಎಂಬುದಕ್ಕೆ ಮತ್ತೊಂದು ಉದಾಹರಣೆ ಕೇರಳದ ಈ ವಿದ್ಯಾರ್ಥಿನಿ… ಹುಟ್ಟುವಾಗಲೇ ಎರಡೂ ಕೈಗಳಿಲ್ಲದ ಈಕೆ ತನ್ನ ಛಲವನ್ನು ಯಾವುದೇ ಕಾರಣಕ್ಕೂ ಬಿಟ್ಟು ಕೊಡಲಿಲ್ಲ…
ಕೈ ಇಲ್ಲದೇ ಜನಿಸಿದ್ದ ಕೇರಳದ ವಿದ್ಯಾರ್ಥಿನಿಗೆ ಹತ್ತನೇ ತರಗತಿಯ ಎಲ್ಲಾ ವಿಷಯಗಳಲ್ಲಿ A+ ಸಿಕ್ಕಿದೆ. ಎರಡೂ ಕೈ ಜನಿಸಿದ್ದ ಮಲಪ್ಪುರಮ್ನ (ಕೇರಳ) ಈ ವಿದ್ಯಾರ್ಥಿನಿ ದೇವಿಕಾ ಹತ್ತನೇ ತರಗತಿಯ ಪರೀಕ್ಷೆಯಲ್ಲಿ
ಎಲ್ಲಾ ವಿಷಯಗಳಲ್ಲಿ A+ ಗ್ರೇಡ್ ಗಳಿಸಿದ್ದು, ರಾಜ್ಯದ ಡಿಜಿಪಿ ಲೋಕನಾಥ್ ಬೆಹೆರಾ ಸನ್ಮಾನಿಸಿದ್ದಾರೆ. ವಿದ್ಯಾರ್ಥಿನಿಯ ತಾಯಿ ಅವಳಿಗೆ ಕಾಲಿನಿಂದ ಬರೆಯಲು ಕಲಿಸಿದ್ದರು, ಶಿಕ್ಷಕರೂ ವಿದ್ಯಾರ್ಥಿನಿಗೆ ತುಂಬಾ ಸಹಕಾರ ನೀಡಿದ್ದಾರೆ. ದೇವಿಕಾಳ ತಂದೆ ಪೊಲೀಸ್ ಅಧಿಕಾರಿಯಾಗಿದ್ದಾರೆ.

ಆಕೆಗೆ ನಾವು ಪಾದಗಳ ಮೂಲಕ ಬರೆಯಲು ಕಳಿಸಿದೆವು. ಸಾಮಾನ್ಯರಂತೆ ಬದುಕಲು ಪ್ರೇರಣೆ ನೀಡಿದೆವು ಎಂದು ದೇವಿಕಳ ಹೆತ್ತವರಾದ ಸಜೀವ್ ಮತ್ತು ಸುಜಾತ ಹೇಳುತ್ತಾರೆ.
ಕಲಿಕೆಯಲ್ಲಿ ಮಾತ್ರವಲ್ಲ, ಡ್ರಾಯಿಂಗ್ ಮುಂತಾದ ಪಠ್ಯೇತರ ಚಟುವಕೆಗಳಲ್ಲೂ ತನ್ನ ಪ್ರತಿಭೆಯನ್ನು ತೋರಿಸಿದ ಸಾಧಕಿ ಈ ದೇವಿಕಾ.
ಪದವಿ ಬಳಿಕ ಸಿವಿಲ್ ಸರ್ವಿಸ್ ಪರೀಕ್ಷೆ ಬರೆದು ಜನರ ಸೇವೆ ಮಾಡಬೇಕು ಎಂಬ ಕನಸನ್ನು ದೇವಿಕಾ ಹೊಂದಿದ್ದಾರೆ.

Leave a Reply