ಇಂಡೋನೇಷ್ಯಾ: ಇಂಡೋನೇಷ್ಯಾದ ಪಾಲು ನಗರದಲ್ಲಿ 7.5 ರಿಕ್ಟರ್ ಮಾಪಕದ ಭೂಕಂಪ ಸಂಭವಿಸಿದ ಬಳಿಕ ಸುನಾಮಿ ಅಲೆಗಳು ಕಾಣಿಸಿಕೊಂಡಿದ್ದು, ಜನ ಅದನ್ನು ಮೊಬೈಲ್ ಕೆಮರಾದಲ್ಲಿ ಸೆರೆ ಹಿಡಿದ ವಿಡಿಯೋ ವೈರಲ್ ಆಗಿದೆ. ಮೊದಲಿಗೆ ಜನರು ಸಾಮಾನ್ಯ ದೈತ್ಯ ಅಲೆಗಳಂತೆ ಕಂಡು ಬಂದ ಸುನಾಮಿಯು ನಂತರ ರಭಸದಲ್ಲಿ ಮುಂದೆ ನುಗ್ಗಿದೆ.

ಸುನಾಮಿ ಅಪ್ಪಳಿಸಿದ ನಂತರ ಜನರು ಹೆದರಿ ಓಡುತ್ತಿರುವ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದ್ದು ಇಂಡೊನೇಷ್ಯಾದ ಸ್ಥಳೀಯ ಚಾನೆಲ್ ಗಳು ಪ್ರಸಾರ ಮಾಡಿದೆ. ಮೂರು ಮೀಟರ ಎತ್ತರದ ಅಲೆಗಳು ದಡಕ್ಕಪ್ಪಳಿಸುವ ದೃಶ್ಯಗಳನ್ನು ಈ ವೀಡಿಯೋದಲ್ಲಿ ನೋಡ ಬಹುದಾಗಿದೆ.

2014 ರಲ್ಲಿ 280000 ಸಾವಿರ ಜನ ಸುನಾಮಿಯ ಹೊಡೆತಕ್ಕೆ ಅಸುನೀಗಿದ್ದರು. ಇದರಲ್ಲಿ ಇಂಡೊನೇಷ್ಯದ ಜನರು ಹೆಚ್ಚು ಬಾಧಿತರಾಗಿದ್ದರು. ಇಂಡೋನೇಷ್ಯಾದಲ್ಲಿ ವರ್ಷಕ್ಕೆ ಸರಾಸರಿ 7000 ಸಾವಿರದಷ್ಟು ಭೂಕಂಪನಗಳು ಸಂಭವಿಸುತ್ತದೆ.

ವೀಡಿಯೋ

Leave a Reply