ದೆಹಲಿಯ ಜೈಲುಗಳಲ್ಲಿ 100ಕ್ಕಿಂತ ಅಧಿಕ ಹಿಂದೂ ಕೈದಿಗಳು ,ಮುಸ್ಲಿಂ ಕೈದಿಗಳ ಜತೆ ಉಪವಾಸ ಆಚರಿಸುತ್ತಿದ್ದಾರೆ.
ದಿಲ್ಲಿಯ 16 ಕೇಂದ್ರೀಯ ಜೈಲುಗಳಲ್ಲಿ ಬಂಧಿಯಾಗಿರುವ 2,658 ಕೈದಿಗಳು ಉಪವಾಸ ಆಚರಿಸುತ್ತಿದ್ದು,ಅದರಲ್ಲಿ 110 ಕೈದಿಗಳು ಹಿಂದೂಗಳು.
ಈ ಜೈಲುಗಳಲ್ಲಿ ಉಪವಾಸ ಆಚರಿಸುತ್ತಿರುವ ಹಿಂದೂ ಕೈದಿಗಳ ಸಂಖ್ಯೆಯಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ,ಈ ವರ್ಷ ಹೆಚ್ಚಳವಾಗಿದೆ.     ಜೈಲು ಆಡಳಿತದ ಪ್ರಕಾರ, ನವರಾತ್ರಿಯ ಸಂದರ್ಭದಲ್ಲಿ ಮುಸ್ಲಿಮ್ ಕೈದಿಗಳು ಕೂಡಾ ಹಿಂದೂ ಕೈದಿಗಳ ಜತೆ ಉಪವಾಸ ಆಚರಿಸುತ್ತಾರೆ.

ವಿಶೇಷವೇನೆಂದರೆ ಈ ಬಾರಿ ಮುಸ್ಲಿಮ್ ಖೈದಿಗಳ ಜೊತೆ 43 ಹಿಂದೂ ಖೈದಿಗಳೂ ಕೂಡ ರಂಝಾನ್ ಉಪವಾಸ ಮಾಡುತ್ತಿದ್ದಾರೆ. 31 ಹಿಂದೂ ಮಹಿಳೆಯರು ಹಾಗೂ 12 ಹಿಂದೂ ಯುವಕರು ಉಅಪವಾಸ ಆಚರಣೆ ಮಾಡುತ್ತಿರುವುದಾಗಿ ಜೈಲು ಅಧಿಕಾರಿಗಳು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ದೆಹಲಿಯ ಮೂರು ಪ್ರಮುಖ ಜೈಲುಗಳಾದ ತಿಹಾರ್, ರೋಹಿನಿ ಹಾಗೂ ಮಾಂಡೋಲಿ ಜೈಲುಗಳಲ್ಲಿ ‘ಸಹರಿ’ ಸಮಯದಲ್ಲಿ ಆಹಾರವನ್ನು ಪೂರೈಸುವ ಸಲುವಾಗಿ, ಉಪವಾಸ ಮಾಡುತ್ತಿದ್ದ ಜನರಿಗೆ ಅನುಕೂಲವಾಗುವಂತೆ ಕ್ಯಾಂಟೀನುಗಳು ಸೇವೆ ಸಲ್ಲಿಸುವ ಸಮಯವನ್ನು ಬದಲಾಯಿಸಲಾಗಿದೆ.

ಜೈಲುಗಳಲ್ಲಿರುವ ಖೈದಿಗಳಿಗೆ ಯಾವುದಾದರೂ ಧಾರ್ಮಿಕ ದತ್ತಿ ಸಂಸ್ಥೆ ಅಥವಾ ಇತರ ಸಮಾಜ ಸೇವಾ ಗುಂಪುಗಳು ಇಫ್ತಾರ್ ಮಾಡಿಸಲು ಮುಂದಾಗುವುದಾದಲ್ಲಿ ಅದಕ್ಕೂ ವ್ಯವಸ್ಥೆ ಕಲ್ಪಿಸಲಾಗಿದೆ. ಜೈಲಿನ ಕ್ಯಾಂಟೀನಿನಲ್ಲಿ ಸಾಕಷ್ಟು ರೂಹ್ ಅಫ್ಜಾ, ಖರ್ಜೂರ ಹಾಗೂ ಹಣ್ಣುಗಳನ್ನು ಸಂಗ್ರಹಿಸಿಡಲಾಗಿದೆ ಎಂದು ಜೈಲಧಿಕಾರಿಗಳು ತಿಳಿಸಿದ್ದಾರೆ.

 

 

Leave a Reply