ಅಜ್ಜಿ ಕತೆಯಲ್ಲಿ ನೀವು ಕೇಳಿರಬಹುದು. ಅರಸೊನಬ್ಬ ಸುಂದರ ಅರಮನೆಯನ್ನು ಕಟ್ಟಿಸುತ್ತಾನೆ. ಸುಂದರ ಅರಮನೆಯ ಗೇಟಿನ ಪಕ್ಕದಲ್ಲಿ ಒಂದು ಮುದುಕಿಯ ಗುಡಿಸಲು ಇರುತ್ತದೆ, ಈ ಗುಡಿಸಲಿನಿಂದಾಗಿ ಅರಮನೆಯ ಸೌಂದರ್ಯ ಕಡಿಮೆಯಾಗುತ್ತದೆ ಎಂದು ಮಂತ್ರಿ ಅಜ್ಜಿಯಿಂದ ಗುಡಿಸಲು ಖರೀದಿಸಲು ಎಲ್ಲಾ ರೀತಿಯ ಪ್ರಯತ್ನ ಮಾಡಿ ವಿಫಲವಾಗುತ್ತಾನೆ. ಕೊನೆಗೆ ವಿಷಯ ಅರಸನ ಕಿವಿಗೆ ಮುಟ್ಟಿದಾಗ ನೀತಿವಂತ ಅರಸ ನನ್ನ ಅರಮನೆಯ ಸೌಂದರ್ಯ ಇರುವುದೇ ಅಜ್ಜಿಯ ಗುಡಿಸಲಿನಿಂದ ಅದನ್ನು ತೆಗೆಯಬಾರದು ಎಂದು ತೀರ್ಪು ಕೊಡುತ್ತಾನೆ.  ಇಂತಹದೇ ಘಟನೆ ಅಮೇರಿಕಾದ ಸಿಯಾಟಲ್ ನಲ್ಲಿ ನಡೆದಿದೆ. 86 ವರ್ಷದ ಎಡಿತ್ ಮೇಸ್ಫೀಲ್ಡ್, ಸಿಯಾಟಲ್ನಲ್ಲಿ 60 ವರ್ಷಗಳ ಕಾಲ ಒಂದೇ ಮನೆಯಲ್ಲಿ ವಾಸಿಸುತ್ತಿದ್ದಳು ಅವಳ ಮನೆಯ ಸುತ್ತ ಮುತ್ತಲ ಎಲ್ಲ ಜಾಗವನ್ನು ಕಂಪೆನಿಯೊಂದು ಮಾಲ್ ಕಟ್ಟಿಸುವ ಉದ್ದೇಶದಿಂದ ಖರೀದಿಸಿತು

ಕಂಪೆನಿ ಕಟ್ಟಿಸಲು ಉದ್ದೇಶಿಸಿದ ಮಾಲ್ ನ ಯೋಜನೆಯಲ್ಲಿ ಎಡಿತ್ ಜಾಗ ಕೂಡ ಬೇಕಾಗಿತ್ತು. ಇದೇ ಕಾರಣದಿಂದ ಎಡಿತ್ ಗೆ ಜಾಗ ಮಾರಲು ಹಲವು ಪ್ರಸ್ತಾಪವನ್ನು ನೀಡಿದರು. ಆದರೆ ಎಡಿತ್ ಮಾತ್ರ ಯಾವುದೇ ಕಾರಣಕ್ಕೂ ಮನೆಯನ್ನು ಮಾರುವುದಿಲ್ಲ ಎಂದು ಹಠ ಹಿಡಿದಳು.

ಕೊನೆಗೆ ಕಂಪೆನಿ ಅವಳಿಗೆ ಒಂದು ಮಿಲಿಯನ್ ಡಾಲರ್ ಕೊಡುವುದಾಗಿ ಹೇಳಿತು. ಆದರೆ ಎಡಿತ್ ಮಾತ್ರ ಒಪ್ಪಲಿಲ್ಲ. ಕೊನೆಗೆ ಕಂಪೆನಿ ಸೋಲು ಒಪ್ಪಿಕೊಂಡು ಎಡಿತ್ ಮನೆಯನ್ನು ಮಧ್ಯದಲ್ಲಿ ಹಾಗೆ ಬಿಟ್ಟು ಸುತ್ತಲೂ ತನ್ನ ಮಾಲ್ ನ ಯೋಜನೆಯನ್ನು ಮುಂದುವರಿಸಿತು. ಇದೆ ಸಮಯದಲ್ಲಿ ಮಾಲ್ ಕಟ್ಟುವ ಸಂಸ್ಥೆಯ ಮ್ಯಾನೇಜರ್ ಮೂರ್ತಿ ಎನ್ನುವ ವ್ಯಕ್ತಿ ಮತ್ತು ಎಡಿತ್ ನಡುವೆ ಮಾನವೀಯ ಸ್ನೇಹ ಬೆಳೆಯಿತು.

ಒಬ್ಬಂಟಿ ಮುದುಕಿಗೆ ಕ್ಯಾನ್ಸರ್ ರೋಗದ ಆರೈಕೆಯನ್ನು ಸ್ವತಃ ಮಾರ್ಟಿನ್ ವಹಿಸಿ ಕೊಂಡ ಕ್ಯಾನ್ಸರ್ ರೋಗದೊಂದಿಂಗೆ ಹೋರಾಟದಲ್ಲಿ ವಿಫಲವಾದ ಎಡಿತ್ ಕೊನೆ ಉಸಿರು ಎಳೆದಳು. ಎಡಿತ್ ಸಾಯುವ ಮೊದಲು ತನ್ನ ಮನೆಯನ್ನು ಮಾರ್ಟಿನ್ ಹೆಸರಿಗೆ ಬರೆದಳು. ಆದ್ರೆ ಮಾರ್ಟಿನ್ ಆ ಮನೆಯನ್ನು ಹಾಗೆಯೇ ಉಳಿಸಿಕೊಂಡು ಕೊನೆಗೆ ಮನೆ ಇಲ್ಲದವರಿಗೆ ದಾನ ಕೊಡುತ್ತಾರೆ.

ಅಜ್ಜಿ ಕತೆಯಲ್ಲಿ ಬರುವ ಹೀರೋ ಪಾತ್ರದಂತೆ ಎಡಿತ್ ನಿಜ ಜೀವನದಲ್ಲಿ ತನ್ನ ಮನೆಯನ್ನು ಯಶಸ್ವಿಯಾಗಿ ಉಳಿಸಿಕೊಂಡು ಹೀರೋ ಆಗುತ್ತಲೇ, ರಾಜನ ಪಾತ್ರದಲ್ಲಿ ಇರುವ ಮಾರ್ಟಿನ್ ನಿಜಕ್ಕೂ ಡಬಲ್ ಹೀರೋ ಆದರು.

Leave a Reply