Image: Younews

6 ನೇ ವಯಸ್ಸಿನ ಮಿಜೋರಾಮ್ನ ಡೆರಿಕ್ ಮುಗ್ಧತೆ ಮತ್ತು ಪ್ರಾಮಾಣಿಕತೆ, ಸಹಾನುಭೂತಿಗಾಗಿ ಎಲ್ಲರ ಮನ ಗೆದ್ದಿದ್ದ. ತನ್ನ ಸೈಕಲ್ ಅಡಿಗೆ ಅನಿರೀಕ್ಷಿತವಾಗಿ ಬಿದ್ದ ಕೋಳಿ ಮರಿಯನ್ನು ಬದುಕಿಸಲು ಕೈಯಲ್ಲಿ ಹಣ ಹಿಡಿದು ಆಸ್ಪತ್ರೆಗೆ ಹೋದ ಈ ಬಾಲಕನ ಚಿತ್ರಕ್ಕೆ ಇಡೀ ಸಾಮಾಜಿಕ ಜಾಲತಾಣಿಗರು ಮನ ಸೋತಿದ್ದರು. ಡೆರಿಕ್ ನ ಈ ಮಾನವೀಯ ಸಹಾನುಭೂತಿಗೆ ಆತನ ಶಾಲೆಯು ಆತನನ್ನು ಸನ್ಮಾನಿಸಿತ್ತು. Word of Appreciation’ ಎಂಬ ಅವಾರ್ಡ್ ನೀಡಿ ಗೌರವಿಸಿತ್ತು. ಆ ಕೋಳಿ ಮರಿ ಸತ್ತಿದೆ ಎಂದು ಆತನಿಗೆ ತಿಳಿದಿಲ್ಲ. ಅದನ್ನು ಆಸ್ಪತ್ರೆಗೆ ಕೊಂಡೊಯ್ಯಲು ತನ್ನ ಹೆತ್ತವರೊಂದಿಗೆ ಆತ ಅಂಗಲಾಚಿದ್ದನು. ಇದೀಗ ಆತನನ್ನು ಪೇಟಾ ಸಂಸ್ಥೆ ಗೌರವಿಸಿ ಎವಾರ್ಡ್ ನೀಡಿದೆ. People for PETA (the Ethical Treatment of Animals) ಎಂಬ ಸಂಸ್ಥೆಯು ಆತನಿಗೆ Compassionate Kid(ಕರುಣಾಮಯಿ ಬಾಲಕ) ಎಂಬ ಪ್ರಶಸ್ತಿ ನೀಡಿ ಗೌರವಿಸಿದೆ.

Leave a Reply